
ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಸೇರಿದಂತೆ ಐದು ತಂಡಗಳು ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಹೊರ ಬಿದ್ದಿದ್ದು, ಇನ್ನುಳಿದ ತಂಡಗಳಾದ ಪಟ್ನಾ ಪೈರೇಟ್ಸ್ ಹರಿಯಾಣ ಸ್ಟೀಲರ್ಸ್ ಸೇರಿದಂತೆ ಬೆಂಗಾಲ್ ವಾರಿಯರ್ಸ್ ಕೂಡ ಇನ್ನೂ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.
ಇಂದು ಪ್ರೊ ಕಬಡ್ಡಿಯಲ್ಲಿ ಕೇವಲ ಒಂದು ಪದ್ಯವಿದ್ದು, ಪಟ್ನಾ ಪೈರೇಟ್ಸ್ ಮತ್ತು ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ ಪಟ್ನಾ ಪೈರೇಟ್ಸ್ ತಂಡ ಇಂದು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ತೆಲುಗು ಟೈಟನ್ಸ್ ಆಡಿರುವ 19 ಪಂದ್ಯದಲ್ಲಿ ಕೇವಲ ಎರಡು ಪಂದ್ಯದಲ್ಲಿ ಜಯ ಸಾಧಿಸಿದ್ದು, ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ತನ್ನ ಕೊನೆಯ ಪಂದ್ಯಗಳಲ್ಲಾದರೂ ಜಯಭೇರಿ ಆಗಲಿದೆಯಾ ಕಾದು ನೋಡಬೇಕಾಗಿದೆ.