ಪ್ರೊ ಕಬಡ್ಡಿಯಲ್ಲಿ ಪ್ಲೇ ಆಫ್ ಸ್ಥಾನಕ್ಕಾಗಿ ಎಲ್ಲಾ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದು, ಇಂದು ಮೊದಲ ಪಂದ್ಯದಲ್ಲೇ ತೆಲುಗು ಟೈಟಾನ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ. ಬೆಸ್ಟ್ ಡಿಫೆಂಡರ್ಸ್ vs ಬೆಸ್ಟ್ ರೈಡರ್ಸ್ ನಡುವಿನ ಹೋರಾಟವನ್ನು ನೋಡಬಹುದಾಗಿದೆ.
ಈ ಬಾರಿಯ ಪ್ರೊ ಕಬಡ್ಡಿ ಪಾಯಿಂಟ್ ಟೇಬಲ್ ನಲ್ಲಿ ಹರಿಯಾಣ ಸ್ಟೀಲರ್ಸ್ ನಂಬರ್ ಒನ್ ಸ್ಥಾನದಲ್ಲಿದ್ದರೆ. ತೆಲುಗು ಟೈಟಾನ್ಸ್ ಐದನೇ ಸ್ಥಾನ ಕಾಯ್ದುಕೊಂಡಿದೆ.
ಉಭಯ ತಂಡಗಳ ಬಲಾಬಲ ನೋಡುವುದಾದರೆ 12 ಬಾರಿ ಮುಖಾಮುಖಿಯಾಗಿದ್ದು, ತೆಲುಗು ಟೈಟಾನ್ಸ್ 5 ಹಾಗೂ ಹರಿಯಾಣ ಸ್ಟೀಲರ್ಸ್ ಆರು ಬಾರಿ ಜಯ ಕಾಣುವ ಮೂಲಕ ಮೇಲುಗೈ ಸಾಧಿಸಿದೆ.
ಒಂದು ಪಂದ್ಯ ಡ್ರಾ ನಿಂದ ಅಂತ್ಯಗೊಂಡಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತನ್ನ ಹೋಂ ಗ್ರೌಂಡ್ ನಲ್ಲಿ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ.