
ಪ್ರೊ ಕಬಡ್ಡಿ ಪಂದ್ಯಗಳು ಇದುವರೆಗೂ ಅಹ್ಮದಾಬಾದ್ ನಲ್ಲಿ ನಡೆದಿದ್ದು ಇಂದಿನಿಂದ ಬೆಂಗಳೂರಿನ ಕಂಠೀರವ ಇಂಡೋರ್ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿವೆ. ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ಮುಖಾಮುಖಿಯಾಗುತ್ತಿದ್ದು, ಪಂದ್ಯ ವೀಕ್ಷಿಸಲು ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.
ಬೆಂಗಳೂರು ಬುಲ್ಸ್ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು ಇಂದು ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ. ಈ ಬಾರಿಯ ಸೀಸನ್ ಅಲ್ಲಿ ಬೆಂಗಳೂರು ಬುಲ್ಸ್ ತಂಡದ ಭರತ್ ಮತ್ತು ಸೌರಬ್ ನಂದಾಲ್ ಅವರಿಂದ ಉತ್ತಮ ಪ್ರದರ್ಶನ ದೊರೆಯದೆ ಇರುವುದು ಅಭಿಮಾನಿಗಳಲ್ಲಿ ಬೇಸರ ತಂದಿದೆ. ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸ್ಯಾಂಡಲ್ ವುಡ್ ನ ಹಲವಾರು ತಾರೆಯರು ಆಗಮಿಸಲಿದ್ದಾರೆ.