ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗಷ್ಟೇ ಶಾಕ್ ಆಗುವಂತಹ ಬಹಿರಂಗ ಹೇಳಿಕೆ ನೀಡಿದ್ದು, ‘ವಿಶ್ವ ಸುಂದರಿ’ ಪಟ್ಟವನ್ನು ಗೆದ್ದ ನಂತರ ತಮ್ಮ ಮಗಳನ್ನು ತವರು ರಾಜ್ಯದಲ್ಲಿ ಸ್ವಾಗತಿಸಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಧು ಚೋಪ್ರಾ, ಬರೇಲಿಯಲ್ಲಿ ಆಕೆಯ ಸ್ವಾಗತ ಕೂಟವನ್ನು ಆರ್ಮಿ ಕ್ಲಬ್‌ನಲ್ಲಿ ಮಾತ್ರ ಆಯೋಜಿಸಲಾಗಿತ್ತು, ಅಲ್ಲಿ ಮಿಲಿಟರಿ ಅಧಿಕಾರಿಗಳು ಮಾತ್ರ ಇದ್ದರು ಮತ್ತು ಸಾಮಾನ್ಯ ನಾಗರಿಕರು ಇರಲಿಲ್ಲ ಎಂದರು.
ಆದಾಗ್ಯೂ, ಪ್ರಿಯಾಂಕಾ ಮುಂಬೈ ತಲುಪಿದಾಗ, ಅಲ್ಲಿ ಅವರಿಗೆ ಸಾಕಷ್ಟು ಚಲನಚಿತ್ರ ಆಫರ್‌ಗಳು ಬಂದವು. ಮುಂಬೈನಲ್ಲಿರುವ ಅವರ ಅಭಿಮಾನಿಗಳು ಆಕೆಯನ್ನು ತೆರೆದ ತೋಳುಗಳಿಂದ ಸ್ವಾಗತಿಸಿದರು, ಇದರ ನಂತರ ಪ್ರಿಯಾಂಕಾ ಅವರ ಬಾಲಿವುಡ್ ವೃತ್ತಿಜೀವನವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು ಎಂದು ಮಧು ಚೋಪ್ರಾ ತಿಳಿಸಿದ್ದಾರೆ.