ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ನಲ್ಲಿರುವ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಸಂಯೋಜಿತ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವರ್ಚುವಲ್ ಮೂಲಕ ಉದ್ಘಾಟಿಸಿದರು.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ.ಸಿಂಗ್ ಮತ್ತು ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಟರ್ಮಿನಲ್ ಕಟ್ಟಡವು ಚಿಪ್ಪಿನ ಆಕಾರದಲ್ಲಿದ್ದು, ಪ್ರಯಾಣಿಕರ ದಟ್ಟಣೆಯ ಹೆಚ್ಚಳದಿಂದಾಗಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) 707.73 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಎನ್ಐಟಿಬಿಯನ್ನು ನಿರ್ಮಿಸಿದೆ.ಒಟ್ಟು 40,837 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಹೊಸ ಟರ್ಮಿನಲ್ ಕಟ್ಟಡವು ಗರಿಷ್ಠ ಸಮಯದಲ್ಲಿ 1,200 ಪ್ರಯಾಣಿಕರನ್ನು ಮತ್ತು ವಾರ್ಷಿಕವಾಗಿ ಸುಮಾರು 40 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮೂರು ಅಂತಸ್ತಿನ ಕಟ್ಟಡವು 28 ಚೆಕ್-ಇನ್ ಕೌಂಟರ್ಗಳು, ಮೂರು ಪ್ರಯಾಣಿಕರ ಬೋರ್ಡಿಂಗ್ ಸೇತುವೆಗಳು ಮತ್ತು ನಾಲ್ಕು ಕನ್ವೇಯರ್ ಬೆಲ್ಟ್ ಗಳನ್ನು ಹೊಂದಿದೆ. ಇಡೀ ಟರ್ಮಿನಲ್ ದಿನಕ್ಕೆ 12 ಗಂಟೆಗಳ ಕಾಲ 100 ಪ್ರತಿಶತ ನೈಸರ್ಗಿಕ ಬೆಳಕನ್ನು ಹೊಂದಿರುತ್ತದೆ, ಜತೆಗೆ ಇದರ ಛಾವಣಿಯ ಮೇಲಿನ ಸ್ಕೈಲೈಟ್ಗಳ ಮೂಲಕ ಕೂಡ ಬೆಳಕನ್ನು ನೀಡುತ್ತದೆ.