
CCRT ನವದೆಹಲಿ ವತಿಯಿಂದ ಪ್ರತಿಭಾ ಶೋಧ ವಿದ್ಯಾರ್ಥಿ ವೇತನ ನೀಡಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಸಾಂಸ್ಕೃತಿಕ(ಸಂಗೀತ, ನೃತ್ಯ, ನಾಟಕ) ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2024-25 ನೇ ಸಾಲಿಗೆ CCRT ನವದೆಹಲಿ ವತಿಯಿಂದ ನೃತ್ಯ, ಡ್ರಾಮಾ, ಚಿತ್ರಕಲೆ, ವಾಸ್ತುಶಿಲ್ಪ, ಕರಕುಶಲ, ಸೃಜನಾತ್ಮಕ ಬರವಣಿಗೆ, ಸಾಹಿತ್ಯ ಕಲೆಯಂಥಹ ಹಲವು ವಿಭಾಗಗಳಲ್ಲಿ ಸಾಧನೆಗೈದಿರುವ 10 ರಿಂದ 14 ವಯೋಮಾನದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಿದ್ದಾರೆ. ವಿದ್ಯಾರ್ಥಿ ವೇತನದ ಅರ್ಜಿಯು www.ccrtindia.gov.in ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.
ತಿಳಿಸಿರುವ ಸೂಚನೆ ಮತ್ತು ಷರತ್ತುಗಳನ್ವಯ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಸದರಿ ವಿಭಾಗಗಳಲ್ಲಿ ಸಾಧನೆಗೈದಿರುವ ಪ್ರತಿಭಾವಂತ ಮಕ್ಕಳನ್ನು ನೋಂದಾಯಿಸಿಕೊಳ್ಳಲು ಸೂಚಿಸಿ ಅಗತ್ಯ ಸಹಕಾರ ನೀಡುವುದು ಹಾಗೂ ನೋಂದಾಯಿತ ವಿದ್ಯಾರ್ಥಿಗಳ ಪಟ್ಟಿಯನ್ನು ನೇರವಾಗಿ ddsch.ccrt@nic.in ಇ-ಮೇಲ್ ವಿಳಾಸಕ್ಕೆ ದಿನಾಂಕ: 31-08- 2024 ರ ಒಳಗಾಗಿ ತಪ್ಪದೆ ಸಲ್ಲಿಸಲು ತಿಳಿಸಿದೆ.
