ಚಂದ್ರಯಾನದ ಬಗ್ಗೆ ನಟ, ನಿರ್ದೇಶಕ ಪ್ರಕಾಶ್ ರಾಜ್ ವ್ಯಂಗ್ಯ; ಜಾಲತಾಣಗಳಲ್ಲೇ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಬೆಂಗಳೂರು: ಇಡೀ ದೇಶವೇ ಹೆಮ್ಮೆ ಪಡುವಂತೆ ಇಸ್ರೋ ವಿಜ್ಞಾನಿಗಳು ಕಾರ್ಯನಿರ್ವಹಿಸಿದ್ದು, ಚಂದ್ರಯಾನ-3 ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಗಾಗಿ ದೇಶಾದ್ಯಂತ ಜನರು ಕಾಯುತ್ತಿದ್ದಾರೆ. ಸುರಕ್ಷಿತವಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಖ್ಯಾತ ನಟ, ನಿರ್ದೇಶಕ ಪ್ರಕಾಶ್ ರಾಜ್ ಮಾತ್ರ ಚಂದ್ರಯಾನದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಚಂದ್ರಯಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಚಹಾ ಚಲ್ಲುತ್ತಿರುವ ವ್ಯಂಗ್ಯಚಿತ್ರದ ಫೋಟೋ ಹಾಕುವ ಮೂಲಕ ವ್ಯಂಗ್ಯವಾಡಿದ್ದಾರೆ. ನಿಮ್ಮಂತಹ ನಟ, ನಿರ್ದೇಶಕನಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಪ್ರಕಾಶ್ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಬ್ರೇಕಿಂಗ್ ನ್ಯೂಸ್ ವಿಕ್ರಂ ಲ್ಯಾಂಡರ್ ಮೂಲಕ ಚಂದ್ರನಿಂದ ಬರುವ ಮೊದಲ ಚಿತ್ರ Wowww..’ಎಂದು ಶೀರ್ಷಿಕೆ ಕೊಟ್ಟು ಇಸ್ರೋ ಮಾಜಿ ಮುಖ್ಯಸ್ಥ ಕೆ.ಶಿವನ್ ಚಹಾ ಸುರಿಯುತ್ತಿರುವ ವ್ಯಂಗ್ಯಚಿತ್ರದ ಫೋಟೋ ಹಾಕಿದ್ದಾರೆ. ಹಿರಿಯ ನಟನ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ನಿಮ್ಮ ದೇಶ, ಜನರ ಪ್ರಗತಿ, ಸಾಧನೆಯನ್ನು ನೀವು ದ್ವೇಷಿಸಲು ಆರಂಭಿಸದಷ್ಟು ದ್ವೇಷ ನಿಮ್ಮನ್ನು ಆವರಿಸುತ್ತದೆ. ಇದರಿಂದ ಜೀವನ ವ್ಯರ್ಥ ಎಂದು ಕೆಲವರು ಗರಂ ಆಗಿದ್ದಾರೆ.

ತನಗೆ ಎಲ್ಲವನ್ನೂ ಕೊಟ್ಟ ದೇಶವನ್ನೇ ಪ್ರಕಾಶ್ ರಾಜ್ ಅವಮಾನಿಸುತ್ತಿದ್ದಾರೆ ಎಂದು ಹಲವರು ಕಿಡಿಕಾರಿದಾರೆ. ಭಾರತದ ಅಸ್ಮಿತತೆಯನ್ನೇ ಪ್ರಶ್ನೆ ಮಾಡುವ ನಟನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಚಂದ್ರಯಾನದ ಬಗ್ಗೆ ಹಿರಿಯ ನಟನ ವ್ಯಂಗ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read