ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಪ್ರಜ್ವಲ್ ರೇವಣ್ಣನನ್ನು ಓಡಿ ಹೋಗಲು ಯಾಕೆ ಬಿಟ್ಟಿದೆ? ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಹೆಚ್.ಡಿ.ರೇವಣ್ಣ, ಸಿಎಂ ನಡುವೆ ಒಪ್ಪಂದ ಇದೆ ಅಂತ ಜನರು ಮಾತನಾಡಿಕೊಳ್ತಿದ್ದಾರೆ. ಯಾಕೆ ಸರ್ಕಾರ ಪ್ರಜ್ವಲ್ ರೇವಣ್ಣ ವಿರುದ್ಧ ಬೇಗನೇ ಎಫ್ ಐ ಆರ್ ದಾಖಲಿಸಲಿಲ್ಲ? ಆತ ಓಡಿ ಹೋಗಲು ಯಾಕೆ ಬಿಟ್ಟಿದ್ದಾರೆ? ರಾಜ್ಯ ಪೊಲೀಸರು ಪ್ರಜ್ವಲ್ ರೇವಣ್ಣನನ್ನು ಅರೆಸ್ಟ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಏನಾದ್ರೂ ಕನಸು ಬೀಳುತ್ತಾ? ರಾಜ್ಯ ಸರ್ಕಾರ ಎಫ್ ಐ ಆರ್ ದಾಖಲಿಸಲು ಯಾಕೆ ವಿಳಂಬ ಮಾಡಿತ್ತು? ಎಫ್ ಐ ಆರ್ ಗೂ ಮೊದಲೇ ಯಾಕೆ ಅರೆಸ್ಟ್ ಮಾಡಿಲ್ಲ? ನಾವು ಪ್ರಜ್ವಲ್ ನನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಜ್ವಲ್ ರೇವಣ್ಣ ಕೇಸ್ ನಮಗೇನೂ ಎಫೆಕ್ಟ್ ಆಗಲ್ಲ. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.