ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಇಷ್ಟುದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಎಸ್ಐಟಿ ವಿಚಾರಣೆಗೆ ಹಜರಾಗುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಇದೀಗ ದೇಶಕ್ಕೆ ಆಗಮಿಸುತ್ತಿದ್ದು, ಜರ್ಮನಿಯ ಏರ್ ಪೋರ್ಟ್ ಗೆ ಪ್ರಜ್ವಲ್ ಎಂಟ್ರಿಕೊಟ್ಟಿದ್ದಾರೆ.
ಕೊನೆಗೂ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಾಸ್ ಆಗುವುದು ಖಚಿತವಾಗಿದ್ದು, ಜರ್ಮನಿಯ ಮ್ಯೂನಿಕ್ ಏರ್ ಪೋರ್ಟ್ ಗೆ ಆಗಮಿಸಿದ್ದಾರೆ. ಏರ್ ಪೋರ್ಟ್ ನಲ್ಲಿ ಪ್ರಜ್ವಲ್ ಲಗೇಜ್ ಚಕ್ ಇನ್ ಆಗಿದ್ದು, 2 ಟ್ರಾಲಿ ಬ್ಯಾಗ್ ಸಮೇತ ಆಗಮಿಸಿದ್ದಾರೆ.
ಮಧ್ಯಾಹ್ನ 3:30ಕ್ಕೆ ಪ್ರಜ್ವಲ್ ರೇವಣ್ಣ ಫ್ಲೈಟ್ ಟೇಕಾಫ್ ಆಗಲಿದ್ದು, ಇಂದು ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ಏರ್ ಪೋರ್ಟ್ ಗೆ ಆಗಮಿಸಲಿದ್ದಾರೆ.
ಪ್ರಜ್ವಲ್ ಆಗಮಿಸುತ್ತಿದ್ದಂತೆಯೇ ಏರ್ ಪೋರ್ಟ್ ನಲ್ಲಿಯೇ ಎಸ್ಐಟಿ ಅಧಿಕಾರಿಗಳು ಬಂಧಿಸಲು ಸಿದ್ಧತೆ ನಡೆಸಿದ್ದಾರೆ.