ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಗುರುವಾರ ಐವರು ಸೈನಿಕರನ್ನು ಹತ್ಯೆಗೈದ ಭಯೋತ್ಪಾದಕ ದಾಳಿಯು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೇಂದ್ರದ ಬಿಜೆಪಿ ಸರ್ಕಾರದ ಪಿತೂರಿಯಾಗಿರಬಹುದು ಎಂದು ಆರ್‌ಜೆಡಿ ಶಾಸಕ ಭಾಯಿ ವೀರೇಂದ್ರ ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
2019 ರಲ್ಲಿ ಪುಲ್ವಾಮಾದಲ್ಲಿ ಮತ್ತು ಪೂಂಚ್ ನಲ್ಲಿ ನಡೆದ ದಾಳಿಗಳ ನಡುವೆ ಸಮಾನತೆ ಇದೆ. ಎರಡೂ ಘಟನೆಗಳು ಒಂದೇ ರೀತಿಯದ್ದಾಗಿವೆ ಎಂದು ಅವರು ಹೇಳಿದರು.
2024 ರಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಪೂಂಚ್ ಘಟನೆಯು ಪುಲ್ವಾಮಾ ದಾಳಿಯನ್ನು ಹೋಲುತ್ತದೆ. ಇದು ಕೇಂದ್ರ ಸರ್ಕಾರದ ಪಿತೂರಿ ಎಂದು ತೋರುತ್ತದೆ. ಪೂಂಚ್‌ನಲ್ಲಿ ನಡೆದ ಘಟನೆ ದುರದೃಷ್ಟಕರವಾಗಿದೆ ಎಂದು ಹೇಳಿದ್ದಾರೆ.