ಪೊಲೀಸ್ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಬ್ಬಂದಿಯೊಬ್ಬರು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಬಾಲಕನನ್ನು ಒದೆಯುವ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಾಗಿನಿಂದ ಅದು ವೈರಲ್ ಆಗಿದೆ.
ಬೆಲ್ತಾರಾ ರೋಡ್ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದ್ದು, ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಡ ಹುಡುಗನನ್ನು ಪೊಲೀಸ್ ಅಧಿಕಾರಿ ಗಮನಿಸಿದ್ದಾರೆ. ಆರ್‌ಪಿಎಫ್ ಅಧಿಕಾರಿ ನಂತರ ನಿರ್ದಯವಾಗಿ ಮಗುವಿಗೆ ಒದೆ ಕೊಟ್ಟಿದ್ದಾರೆ. ಒಂಚೂರು ಕನಿಕರವಿಲ್ಲದೇ ಪೊಲೀಸ್ ಅಧಿಕಾರಿ ಒದೆಯುತ್ತಿರುವ ವಿಡಿಯೋ ಮಾನವೀಯತೆ ಮರೆಯಾಯ್ತಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಮಗುವಿನ ಮೇಲೆ ಆರ್‌ಪಿಎಫ್ ಅಧಿಕಾರಿ ತನ್ನ ಕಾಲಿಟ್ಟು ನಿಂತಿರುವುದನ್ನು ತೋರಿಸುವ ಮೂಲಕ ವೀಡಿಯೊ ಆರಂಭವಾಗಿದೆ. ಇದಾದ ಬಳಿಕ, ಅಧಿಕಾರಿ ಮಗುವನ್ನು ತನ್ನ ಕಾಲುಗಳಿಂದ ತಳ್ಳುತ್ತಾರೆ ಹಾಗೂ ಮಲಗಿದ್ದ ಮಗುವಿಗೆ ಒದೆಯಲು ಆರಂಭಿಸಿದ್ದಾರೆ. ಅಲ್ಲೇ ಇದ್ದ ಜನರು ಈ ದೃಶ್ಯವನ್ನು ನೋಡಿ ಮೌನಕ್ಕೆ ಶರಣಾಗಿದ್ದರೆ ಹೊರತು ಪೊಲೀಸ್ ಅಧಿಕಾರಿಯನ್ನೇ ತಡೆಯುವ ಯಾವುದೇ ಧೈರ್ಯವನ್ನು ಮಾಡಿಲ್ಲ