ಬೆಂಗಳೂರು : ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಶಂಕಿತ ಉಗ್ರ ಜಾಹಿದ್ ತಬ್ರೇಜ್ ನಿವಾಸದಲ್ಲಿ 4 ಗ್ರೆನೇಡ್ ಗಳು ಪತ್ತೆಯಾಗಿದೆ.
ಈ ಬಗ್ಗೆ ಹೇಳಿಕೆ ನೀಡಿದ ಶಂಕಿತ ಉಗ್ರ ಜಾಹಿದ್ ಸಹೋದರ ‘ ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ, ಪೊಲೀಸರೇ ನಮ್ಮ ಮನೆಗೆ ‘ಗ್ರೆನೇಡ್’ ತಂದಿಟ್ಟಿದ್ದಾರೆ ಎಂದು ಶಂಕಿತ ಉಗ್ರ ಜಾಹಿದ್ ಸಹೋದರ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿದೆ.
ನಮ್ಮ ಮನೆಯಲ್ಲಿ ಯಾಕೆ ನಾವು ಗ್ರೆನೇಡ್ ಇಟ್ಟುಕೊಳ್ಳಬೇಕು, ನಾವ್ಯಾಕೆ ಇದನ್ನು ಇಟ್ಟುಕೊಳ್ಳಬೇಕು. ಪೊಲೀಸರು ಗ್ರೆನೇಡ್ ಇಟ್ಟುಕೊಂಡು ಬಂದು ಅವರೇ ತೆಗೆದುಕೊಂಡಿದ್ದಾರೆ. ಫ್ಯಾಮಿಲಿ ಇರುವ ಮನೆಯಲ್ಲಿ ಯಾಕೆ ಅದನ್ನು ಇಟ್ಟುಕೊಳ್ಳುತ್ತೇವೆ. ಕೆಮಿಕಲ್ ಫ್ಯಾಕ್ಟರಿಯಲ್ಲಿ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದನು. ಅವನು ಏನು ತಪ್ಪು ಮಾಡಿಲ್ಲ ಎಂದು ಜಾಹಿದ್ ಸಹೋದರ ಆವೇಜ್ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಂತಹ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ‘ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ನಿವಾಸದಲ್ಲಿ ಕೆಮಿಕಲ್ ಹಾಗೂ ಮರಳು ತುಂಬಿದ್ದ ಚೀಲದಲ್ಲಿ ಗ್ರೆನೇಡ್ ಪತ್ತೆಯಾಗಿದೆ. ಬಂಧಿತ 5 ನೇ ಆರೋಪಿ ಜಾಹಿದ್ ತಬ್ರೇಜ್ ಮನೆಯ ಬೀರುವಿನಲ್ಲಿ ಗ್ರೆನೇಡ್ ಪತ್ತೆಯಾಗಿದೆ. ಸದ್ಯ ಅದನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದಾರೆ. ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬೆಂಗಳೂರಿನ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 7 ಶಂಕಿತ ಉಗ್ರರ ಪೈಕಿ ಐವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಆರೋಪಿ ನಂಬರ್-1 ನಜೀರ್ ಹಾಗೂ ಆರೋಪಿ ನಂಬರ್ 2 ಸದ್ಯ ಪರಾರಿಯಾಗಿದ್ದು, 3 ಸುಹೇಲ್, 4 ಉಮರ್, 5, ಜಾಹೀದ್, 6 ಮುದಾಸಿರ್, ಫೈಜಲ್ ಆರೆಸ್ಟ್ ಆಗಿದ್ದಾರೆ.