BIG NEWS: ರಾಷ್ಟ್ರಪತಿಯನ್ನೇ ಅವಮಾನಿಸಲು ಎಷ್ಟು ಧೈರ್ಯ ನಿಮಗೆ? ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಪೂರ್ ಲೇಡಿ’ ಎಂದು ಅವಮಾನಿಸಿದ್ದ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ರಾಷ್ಟ್ರಪತಿಯನ್ನೇ ಅವಮಾನಿಸಲು ಎಷ್ಟು ಧೈರ್ಯ ನಿಮಗೆ? ಎಂದು ಗುಡುಗಿದ್ದಾರೆ.

ಸಂಸತ್ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ರಾಷ್ಟ್ರಪತಿ ಭಾಷಣ ಮುಗಿಯುತ್ತಿದ್ದಂತೆ ಹೊರ ಬಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ,’ಪೂರ್ ಲೇಡಿ, ಭಾಷಣ ಮುಗಿಸುವ ಹೊತ್ತಿಗೆ ರಾಷ್ಟ್ರಪತಿಗಳು ತುಂಬಾ ಸುಸ್ತಾಗಿದ್ದರು’ ಎಂದು ವ್ಯಂಗ್ಯವಾಡಿದ್ದರು.

ಸೋನಿಯಾ ಗಾಂಧಿ ಅವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ದೇಶದ ಬುಡಕಟ್ಟು ಮಗಳನ್ನು ಕಾಂಗ್ರೆಸ್ ಅಪಮಾನಿಸಿದೆ. ರಾಷ್ಟ್ರಪತಿಯನ್ನೇ ಅವಮಾನಿಸಲು ಎಷ್ಟು ಧೈರ್ಯ ನಿಮಗೆ? ಕಾಂಗ್ರೆಸ್ ನವರ ಭಾಷೆ ನಗರ ನಕ್ಸಲರಂತಿದೆ. ಕಾಂಗ್ರೆಸ್ ನ ಶ್ರೀಮಂತ ಕುಟುಂಬ ರಾಷ್ಟ್ರಪತಿ ಮುರ್ಮು ಅವರನ್ನು ಅಪಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read