ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪನ್ನಗಳ ಪ್ರಚಾರದ ವಿಡಿಯೋ ಹಂಚಿಕೊಂಡಿದ್ದಾರೆ. ನಮೋ ಆಪ್‌ನಲ್ಲಿ ಸ್ವದೇಶಿ ಉತ್ಪನ್ನಗಳೊಂದಿಗೆ ಸೆಲ್ಫಿಗಳನ್ನು ಹಂಚಿಕೊಳ್ಳಲು ಮತ್ತು ಯುಪಿಐ ಮೂಲಕ ಪಾವತಿಗಳನ್ನು ಮಾಡಲು ನಾಗರಿಕರಿಗೆ ಕರೆ ನೀಡಿದ್ದಾರೆ.
2023ರ ದೀಪಾವಳಿಗೆ ಮುಂಚಿತವಾಗಿ ‘ಅನುಪಮಾ’ ನಟಿ ಒಳಗೊಂಡ ಸ್ಥಳೀಯ ಉತ್ಪನ್ನಗಳ ಪ್ರಚಾರದ ವಿಡಿಯೋಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧ್ವನಿ ನೀಡಿದ್ದಾರೆ. NaMo ಅಪ್ಲಿಕೇಶನ್‌ನಲ್ಲಿ ಭಾರತ-ನಿರ್ಮಿತ ಉತ್ಪನ್ನಗಳು ಮತ್ತು ಸ್ಥಳೀಯ ಕಾರ್ಮಿಕರೊಂದಿಗೆ ಸೆಲ್ಫಿ ಹಂಚಿಕೊಳ್ಳಲು ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ಅನುಪಮಾ’ ಟಿವಿ ಧಾರಾವಾಹಿ ಖ್ಯಾತಿಯ ರೂಪಾಲಿ ಗಂಗೂಲಿ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 2023 ರ ದೀಪಾವಳಿಗೆ ಮುಂಚಿತವಾಗಿ “ಲೋಕಲ್ ಫಾರ್ ವೋಕಲ್” ಗೆ ಒತ್ತು ನೀಡುವಂತೆ ತಿಳಿಸಿದ್ದಾರೆ. ಮುಂಬರುವ ಹಬ್ಬಗಳ ಸಮಯದಲ್ಲಿ ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಪ್ರಚಾರ ಮಾಡಲು ಮತ್ತು ಖರೀದಿಸಲು ತಿಳಿಸಿದ್ದು, ಸ್ಥಳೀಯವಾಗಿ ಉತ್ಪಾದಿಸುವ ಉತ್ಪನ್ನಗಳು ಮತ್ತು ಸ್ಥಳೀಯ ಕೆಲಸಗಾರರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೇಳಿದ್ದಾರೆ.
ನಮೋ ಆಪ್ ನಲ್ಲಿ ಆಯ್ದ ಸೆಲ್ಫಿಗಳನ್ನು ಮರು ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಅಕ್ಟೋಬರ್ 29 ರಂದು ನಡೆದ ‘ಮನ್ ಕಿ ಬಾತ್’ನ 106 ನೇ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಅವರು ಹಬ್ಬದ ಋತುವಿನ ನಡುವೆ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಲು ತಿಳಿಸಿದ್ದರು.