ವ್ಲಾಡಿವೋಸ್ಟಾಕ್: ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ವ್ಲಾಡಿಮಿರ್ ಹೇಳಿದ್ದಾರೆ.
ರಷ್ಯಾದ ಬಂದರು ಪಟ್ಟಣ ವ್ಲಾಡಿವೋಸ್ಟಾಕ್ ನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನು ಶ್ಲಾಘಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್, 8 ನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ (ಇಇಎಫ್) ರಷ್ಯಾ ನಿರ್ಮಿತ ಕಾರುಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ದೇಶೀಯವಾಗಿ ತಯಾರಿಸಿದ ವಾಹನಗಳನ್ನು ಬಳಸಬೇಕು ಮತ್ತು ಪಿಎಂ ಮೋದಿಯವರ ನಾಯಕತ್ವದಲ್ಲಿ ಭಾರತವು ಈಗಾಗಲೇ ತನ್ನ ನೀತಿಗಳ ಮೂಲಕ ಉದಾಹರಣೆಗಳನ್ನು ನೀಡಿದೆ ಎಂದು ಪುಟಿನ್ ಹೇಳಿದರು.
1990 ರ ದಶಕದಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ ಆಡಿ ಕಾರುಗಳಿಗಿಂತ ಅವು ಹೆಚ್ಚು ಸಾಧಾರಣವಾಗಿ ಕಾಣುತ್ತವೆ ಎಂಬುದು ನಿಜ, ಆದರೆ ಇದು ಸಮಸ್ಯೆಯಲ್ಲ. ನಾವು ನಮ್ಮ ಅನೇಕ ಪಾಲುದಾರರನ್ನು, ಉದಾಹರಣೆಗೆ ಭಾರತವನ್ನು ಅನುಕರಿಸಬೇಕು ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯ ನಿರ್ಮಿತ ವಾಹನಗಳ ತಯಾರಿಕೆ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಶ್ಲಾಘಿಸಿದ್ದಾರೆ.
ರಷ್ಯಾ ನಿರ್ಮಿತ ವಾಹನಗಳನ್ನು ಬಳಸುವುದು ಸಂಪೂರ್ಣವಾಗಿ ಒಳ್ಳೆಯದು,ನಮ್ಮಲ್ಲಿ ವಾಹನಗಳಿವೆ, ಮತ್ತು ನಾವು ಅವುಗಳನ್ನು ಬಳಸಬೇಕು, ಇದು ಸಂಪೂರ್ಣವಾಗಿ ಒಳ್ಳೆಯದು. ಇದು ನಮ್ಮ ಡಬ್ಲ್ಯುಟಿಒ ಬಾಧ್ಯತೆಗಳ ಯಾವುದೇ ಉಲ್ಲಂಘನೆಗೆ ಕಾರಣವಾಗುವುದಿಲ್ಲ, ವಿವಿಧ ವರ್ಗದ ಅಧಿಕಾರಿಗಳು ಯಾವ ಕಾರುಗಳನ್ನು ಓಡಿಸಬಹುದು ಎಂಬುದರ ಬಗ್ಗೆ ನಾವು ಒಂದು ನಿರ್ದಿಷ್ಟ ಸರಪಳಿಯನ್ನು ರಚಿಸಬೇಕು, ಇದರಿಂದ ಅವರು ದೇಶೀಯವಾಗಿ ತಯಾರಿಸಿದ ಕಾರುಗಳನ್ನು ಬಳಸುತ್ತಾರೆ ” ಎಂದು ಪುಟಿನ್ ವ್ಲಾಡಿವೋಸ್ಟಾಕ್ನಲ್ಲಿ ಹೇಳಿದರು.