ಅರ್ಜೆಂಟೀನಾದ ರೂಪದರ್ಶಿ ಮತ್ತು ನಟಿ ಸಿಲ್ವಿನಾ ಲೂನಾ (43) ಅವರ ಅಕಾಲಿಕ ನಿಧನವು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ.
ಅರ್ಜೆಂಟೀನಾದ ರೂಪದರ್ಶಿ ಮತ್ತು ನಟಿ ಸಿಲ್ವಿನಾ ಲೂನಾ ಪ್ಲಾಸ್ಟಿಕ್ ಸರ್ಜರಿ ಅಡ್ಡಪರಿಣಾಮದಿಂದ 43 ವರ್ಷಕ್ಕೆ ಮೃತಪಟ್ಟಿದ್ದಾರೆ. ಅರ್ಜೆಂಟೀನಾದ ನ್ಯಾಷನಲ್ ಅಡ್ಮಿನಿಸ್ಟ್ರೇಷನ್ ಆಫ್ ಡ್ರಗ್ಸ್, ಫುಡ್ ಅಂಡ್ ಮೆಡಿಕಲ್ ಟೆಕ್ನಾಲಜಿಯಿಂದ ನಿಷೇಧಿಸಲ್ಪಟ್ಟಿರುವ ಪಾಲಿಮಿಥೈಲ್ಮೆಥಾಕ್ರಿಲೇಟ್ ಚುಚ್ಚು ಮದ್ದನ್ನು ಸರ್ಜರಿ ಸಮಯದಲ್ಲಿ ನಟಿಗೆ ನೀಡಲಾಗಿತ್ತು. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು ಎಂದು ಹೇಳಲಾಗಿದೆ.
ಲೂನಾ ಅವರು ಸಾಯುವ ಕೆಲವು ವಾರಗಳ ಮೊದಲು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಆದಾಗ್ಯೂ, ಶಸ್ತ್ರಚಿಕಿತ್ಸೆಯು ಅಪಾಯಕಾರಿ ತಿರುವು ಪಡೆದುಕೊಂಡಿತು, ಇದು ಮೂತ್ರಪಿಂಡ ವೈಫಲ್ಯ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ಅವರನ್ನು ಉಳಿಸಲು ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಆಗಲಿಲ್ಲ.
ಇದಲ್ಲದೇ ಅವರಿಗೆ 2015ರಲ್ಲಿ ಅವರಿಗೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿ ಅವರು ಚಿಕಿತ್ಸೆ ಪಡೆದಿದ್ದರು. ನಂತರ ವೈದ್ಯರು ಆಕೆಗೆ ಮೂತ್ರಪಿಂಡದ ಕೊರತೆ ಮತ್ತು ಹೈಪರ್ಕಾಲ್ಸೆಮಿಯಾ ಇದೆ ಎಂದು ಪತ್ತೆಹಚ್ಚಿದರು ಮತ್ತು ಮೂತ್ರಪಿಂಡ ಕಸಿ ಪಡೆಯುವವರೆಗೆ ಸಾಪ್ತಾಹಿಕ ಡಯಾಲಿಸಿಸ್ ಚಿಕಿತ್ಸೆ ನೀಡಲಾಗಿತ್ತು.