ಟೋಕಿಯೊ: ಭೀಕರ ಭೂಕಂಪದಿಂದ ತತ್ತರಿಸಿರುವ ಜಪಾನ್ ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಟೋಕಿಯೊ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ವಿಮಾನ ಹೊತ್ತಿ ಉರಿದಿದೆ.
ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಈ ದುರಂತ ಸಂಭವಿಸಿದ್ದು, ಜಪಾನ್ ಏರ್‌ಲೈನ್ಸ್ ವಿಮಾನವೊಂದು ಇದ್ದಕ್ಕಿದ್ದಂತೆ ಬೆಂಕಿಗಾಹುತಿಯಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಮಾನದ ಕಿಟಕಿಗಳಿಂದ ಅಗ್ನಿಯ ಜ್ವಾಲೆಗಳು ಹೊರಬರುತ್ತಿರುವ ದೃಶ್ಯಾವಳಿಗಳು ಭಯಂಕರವಾಗಿದೆ.
ವಿಮಾನದಲ್ಲಿ 367 ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ವಿಮಾನದಲ್ಲಿ ಬೆಂಕಿ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
https://twitter.com/SaleemQadri_/status/1742116986828579058?ref_src=twsrc%5Etfw%7Ctwcamp%5Etweetembed%7Ctwterm%5E1742116986828579058%7Ctwgr%5Ecf238c4472b7425d8cf61c74c2daa4cb51218c33%7Ctwcon%5Es1_c10&ref_url=https%3A%2F%2Fwww.freepressjournal.in%2Fworld%2Fbreaking-japanese-plane-catches-fire-on-runway-at-tokyo-airport-visuals-surface