ನಿನ್ನೆಯಿಂದ ಪುಣೆಯಲ್ಲಿ ಪ್ರೊ ಕಬಡ್ಡಿ ಪಂದ್ಯ ಆರಂಭವಾಗಿದ್ದು, ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವೆ ನಡೆದ ಮೊದಲ ಪಂದ್ಯ ಡ್ರಾ ದಿಂದ ಅಂತ್ಯಗೊಂಡಿದೆ.
ಈ ಮೂಲಕ ಗುಜರಾತ್ ಜೈಂಟ್ಸ್ ಹತ್ತನೇ ಸ್ಥಾನಕ್ಕೆ ಜಿಗಿದಿದೆ. ಬೆಂಗಳೂರು ಬುಲ್ಸ್ ತಂಡಕ್ಕೆ ಜಯ ಮತ್ತೊಮ್ಮೆ ಕೈತಪ್ಪಿದ್ದು, ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿದೆ.
ಇಂದು ನಡೆಯುವ ಪ್ರೊ ಕಬಡ್ಡಿಯ ಪಂದ್ಯದಲ್ಲಿ ಯುಪಿ ಯೋಧಾಸ್ ಹಾಗೂ ತೆಲುಗು ಟೈಟಾನ್ಸ್ ಮುಖಾಮುಖಿಯಾಗಲಿದ್ದು, ರೈಡರ್ಗಳ ಕಾಳಗವನ್ನು ನೋಡಬಹುದಾಗಿದೆ. ಉಭಯ ತಂಡಗಳಲ್ಲೂ ಬಲಿಷ್ಠ ರೈಡರ್ಗಳಿದ್ದು, ಮತ್ತೊಂದು ರೋಮಾಂಚನಕಾರಿ ಪಂದ್ಯಕ್ಕೆ ಪುಣೆಯ ಬಾಲೆವಾಡಿ ಕ್ರೀಡಾಂಗಣ ಸಜ್ಜಾಗಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಟೇಬಲ್ ಟಾಪರ್ ಹರಿಯಾಣ ಸ್ಟೀಲರ್ಸ್ ಜೊತೆ ಬೆಂಗಾಲ್ ವಾರಿಯರ್ಸ್ ಸೆಣೆಸಾಟ ನಡೆಸಲಿದೆ.