ಉತ್ತರ ಅಮೆರಿಕಾದ ಗ್ರಾನ್ ಡೆಸಿಯರ್ಟೋ ಡ ಅಲ್ತಾರ್‌ನ ಸೊನೊರನ್ ಮರುಭೂಮಿಯು ಹಿಮದ ಹೊದಿಕೆಯಲ್ಲಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೊನೊರನ್ ಮರುಭೂಮಿಯು 1,20,000 ಚದರ ಮೈಲಿಯಷ್ಟು ವಿಸ್ತಾರವಾಗಿದ್ದು, ಅಮೆರಿಕ ಹಾಗೂ ಮೆಕ್ಸಿಕೋದ ಅರಿಜ಼ೋನಾ, ಕ್ಯಾಲಿಫೋರ್ನಿಯಾ, ಸೊನೊರಾ, ಬಜಾ ಕ್ಯಾಲಿಫೋರ್ನಿಯಾ, ಬಜಾ ಕ್ಯಾಲಿಫೋರ್ನಿಯಾ ಸುರ್ ಪ್ರದೇಶಗಳಲ್ಲಿ ಹಬ್ಬಿದೆ. ಬೇಸಿಗೆ ತಾಪಮಾನ ಸಾಮಾನ್ಯವಾಗಿ 50 ಡಿಗ್ರೀ ಸೆಲ್ಸಿಯಸ್‌ನಷ್ಟು ಇರುವ ಈ ಪ್ರದೇಶದಲ್ಲಿ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ.
ಅಸಹಜವಾದ ವಾತಾವರಣದಿಂದಾಗಿ ಭಾರೀ ಹಿಮಗಾಳಿ ಬೀಸುತ್ತಿರುವ ಕಾರಣ, 1989ರಿಂದ ಇದೇ ಮೊದಲ ಬಾರಿಗೆ ಹಿಮಪಾತ ಸಂಭವಿಸಿದೆ ಎನ್ನಲಾಗಿದೆ. ಇದರ ಬೆನ್ನಿಗೇ, ಸೊನೊರನ್ ಮರುಭೂಮಿಲ್ಲಿ 10 ಸೆಂಮೀ ಮಳೆಯೂ ಆಗಿದೆ.
ನಾಲ್ಕು ಇಂಚಿನಷ್ಟು ಹಿಮದ ಹೊದಿಕೆಯಿಂದ ಆವೃತವಾಗಿರುವ ಸೊನೊರನ್ ಮರುಭೂಮಿಯ ಚಿತ್ರಗಳನ್ನು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಜಾಕ್ ಡೈಕಿಂಗಾ ಮಾರ್ಚ್ 2ರಂದು ಸೆರೆ ಹಿಡಿದಿದ್ದಾರೆ.