ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಕ್‌ಪಿಟ್‌ನಲ್ಲಿ ಗುಜಿಯಾಸ್ (ಉತ್ತರ ಭಾರತದ ತಿಂಡಿ) ಮತ್ತು ಪಾನೀಯವನ್ನು ಸೇವಿಸಿದ ಕಾರಣದಿಂದ ಸ್ಪೈಸ್ ಜೆಟ್ ತನ್ನ ಇಬ್ಬರು ಪೈಲಟ್‌ಗಳನ್ನು ಕೆಲಸದಿಂದ ವಜಾ ಮಾಡಿದೆ.
ಮಾರ್ಚ್ 8 ರಂದು ದೆಹಲಿಯಿಂದ ಗುವಾಹಟಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹೋಳಿ ಹಬ್ಬದ ಪ್ರಯುಕ್ತ ಇಡೀ ದೇಶವೇ ಬಣ್ಣದ ಹಬ್ಬವನ್ನು ಆಚರಿಸುತ್ತಿತ್ತು. ಈ ಸಂದರ್ಭದಲ್ಲಿ ಪೈಲಟ್‌ಗಳಲ್ಲಿ ಒಬ್ಬರು ಸಾಂಪ್ರದಾಯಿಕ ಹೋಳಿ ಸಿಹಿಯಾದ ಗುಜಿಯಾವನ್ನು ಪೇಪರ್ ಕಪ್‌ನಲ್ಲಿ ಪಾನೀಯದೊಂದಿಗೆ ಸೇವಿಸುತ್ತಿದ್ದರು.
ಇದರ ಫೋಟೋ ತೆಗೆಯಲಾಗಿದ್ದು, ಅದು ವೈರಲ್ ಆಗಿದೆ. ಚಿತ್ರ ವೈರಲ್ ಆಗುತ್ತಿದ್ದಂತೆ, ಪೈಲಟ್‌ಗಳು ಪ್ರಯಾಣಿಕರ ಸುರಕ್ಷತೆಯನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇಬ್ಬರೂ ಪೈಲಟ್‌ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಈ ವಿಷಯದ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಕಾಕ್‌ಪಿಟ್‌ನಲ್ಲಿ ಆಹಾರ ಸೇವನೆಗೆ ಕಟ್ಟುನಿಟ್ಟಾದ ನಿಯಮಗಳು ಇರುವ ಕಾರಣ ಈ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.