alex Certify 2,000 ವರ್ಷಗಳಾದರೂ ಅದ್ಭುತವಾಗಿ ಸಂರಕ್ಷಿಸಲ್ಪಟ್ಟಿದೆ ಈ `ಮಮ್ಮಿ` ಅಂಗಾಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2,000 ವರ್ಷಗಳಾದರೂ ಅದ್ಭುತವಾಗಿ ಸಂರಕ್ಷಿಸಲ್ಪಟ್ಟಿದೆ ಈ `ಮಮ್ಮಿ` ಅಂಗಾಂಗ

ಸಾವಿರಾರು ವರ್ಷಗಳ ಮಟ್ಟಿಗೆ ಸಂರಕ್ಷಿಸಿಕೊಂಡು ಬಂದಿರುವ ಮಮ್ಮಿಗಳ ಅನೇಕ ವಿಡಿಯೋಗಳನ್ನು ನಾವು ಅದಾಗಲೇ ನೋಡಿದ್ದೇವೆ.

100 ವರ್ಷಗಳ ಹಿಂದೆ ಮೃತಪಟ್ಟ ಎರಡು ವರ್ಷಗಳ ಬಾಲೆಯೊಬ್ಬಳ ದೇಹವೊಂದು ’ಜಗತ್ತಿನ ಅತಿ ಸುಂದರ ಮಮ್ಮಿ’ ಎಂಬ ಹೆಗ್ಗಳಿಕೆಗೆ ಭಾಜನವಾಗಿತ್ತು.

1918-1920ರ ನಡುವೆ ಈ ಪ್ರದೇಶದಲ್ಲಿ ಹಬ್ಬಿದ ಸ್ಪಾನಿಶ್ ಫ್ಲೂ ಸಾಂಕ್ರಮಿಕದಿಂದ ನ್ಯೂಮೋನಿಯಾ ಬಂದು ಡಿಸೆಂಬರ್‌ 2, 1920ರಲ್ಲಿ ಮೃತಪಟ್ಟ ರೊಸಾಲಿಯಾ ಲೊಂಬಾರ್ಡೋ ಹೆಸರಿನ ಬಾಲೆಯ ದೇಹವನ್ನು ಇಟಲಿಯ ಪಾಮೆರೋದಲ್ಲಿ ಬಹಳ ಚೆನ್ನಾಗಿ ಸಂರಕ್ಷಿಸಿ ಇಡಲಾಗಿದೆ. ನೈಟ್ರೋಜನ್ ತುಂಬಿದ ಗಾಜಿನ ಪೆಟ್ಟಿಗೆಯಲ್ಲಿ ಈ ದೇಹವನ್ನು ಇನ್ನೂ ಚೆನ್ನಾಗಿ ಸಂರಕ್ಷಿಸಿಡಲಾಗಿದೆ.

ಇದೀಗ ಇದಕ್ಕಿಂತ ಇನ್ನೂ ಚೆನ್ನಾಗಿ ಸಂರಕ್ಷಿಸಿಟ್ಟ ಮಮ್ಮಿಯೊಂದು ಸುದ್ದಿ ಮಾಡುತ್ತಿದೆ. ಅನೇಕ ವರ್ಷಗಳ ಹಿಂದೆ ಅನ್ವೇಷಿಸಲಾದ, 2000 ವರ್ಷಗಳ ಹಿಂದಿನ ಮಮ್ಮಿಯೊಂದು ಸುದ್ದಿ ಮಾಡುತ್ತಿದೆ.

ಕ್ಸಿನ್ ಜ಼ುಯಿ ಅಥವಾ ದಿ ಲೇಡಿ ಆಫ್ ಡಾಯಿ ಎಂದು ಕರೆಯಲ್ಪಡುವ ಈ ವ್ಯಕ್ತಿ 2,000 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈಕೆಯ ದೇಹವನ್ನು 2,000 ವರ್ಷಗಳಾದರೂ ಸಂರಕ್ಷಿಸಿಟ್ಟಿರುವ ಪರಿ ಹೇಗಿದೆಯೆಂದರೆ, ಆಂತರಿಕ ಅಂಗಗಳು ಇನ್ನೂ ಸಹ ಕೆಲಸ ಮಾಡುವ ಸ್ಥಿತಿಯಲ್ಲಿವೆಯಂತೆ.

ಚೀನಾದ ಹುನಾನ್ ಪ್ರಾಂತ್ಯದ ಮಾವಾಂಗುಡಿ ಪ್ರದೇಶದಲ್ಲಿ 1968ರಲ್ಲಿ ಈ ದೇಹ ಹಾಗೂ 1,400 ಇತರೆ ವಸ್ತುಗಳನ್ನು ಅನ್ವೇಷಿಸಲಾಗಿದೆ. ಈ ವಸ್ತುಗಳನ್ನು ಹುನಾನ್ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ.

ಈಕೆಯ ಚರ್ಮ ಇನ್ನೂ ತೇವಾಂಶವನ್ನು ಉಳಿಸಿಕೊಂಡಿದ್ದು, ಕಣ್ಣುಗಳು ಸಹ ಚೆನ್ನಾಗೇ ಇವೆ.

ಲೇಡಿ ಆಫ್ ಡಾಯಿ ಸಿರಿವಂತ ಮನೆತನದಿಂದ ಬಂದಿದ್ದು, ಆಕೆಯ ದೇಹವನ್ನು ರೇಷ್ಮೆಯ 18 ಪದರಗಳಲ್ಲಿ ಸುತ್ತಿಡಲಾಗಿದ್ದು, ಆಕೆಯ ಶವಪೆಟ್ಟಿಗೆಯನ್ನು ಸ್ಪಷ್ಟವಾದ ದ್ರವದಲ್ಲಿ ತುಂಬಲಾಗಿದೆ. ಬಹುಶಃ ಈಕೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...