ರಾಜಕೀಯ ಸಮಾರಂಭಕ್ಕೆ ಅಥವಾ ಪ್ರಚಾರ ಕಾರ್ಯಕ್ರಮಕ್ಕೆ ಹಣ ಪಡೆದು ಬರುವ ಜನರನ್ನು ನೀವು ನೋಡಿರುತ್ತೀರಿ. ಇದು ಸಾಮಾನ್ಯ. ಆದ್ರೆ ಹೆಣದ ಮುಂದೆ ಅಳುವವರನ್ನೂ ನೀವು ಹಣ ನೀಡಿ ಕರೆಸಬಹುದು. ಯಸ್, ಸಂತೋಷವಾಗಿದ್ದಾಗ ಬರದೆ ಹೋದ್ರೂ ದುಃಖದಲ್ಲಿರುವಾಗ ಜನರಿಗೆ ನೆರವಾಗಬೇಕು ಎನ್ನುವ ಮಾತಿದೆ. ಈಗಿನ ಕಾಲದಲ್ಲಿ ಎಲ್ಲರೂ ಬ್ಯುಸಿ. ಹೊರಗಿನವರಿರಲಿ, ಕುಟುಂಬಸ್ಥರೇ ಎಲ್ಲ ಸಂದರ್ಭದಲ್ಲಿ ಜೊತೆಯಲ್ಲಿರೋದಿಲ್ಲ. ಕೆಲ ಪ್ರದೇಶದಲ್ಲಿ ಹೆಣದ ಮುಂದೆ ಅಳಲು, ಹೆಣವನ್ನು ಹೊರಲು ಜನರಿಲ್ಲದಂತಾಗಿದೆ. ಇದನ್ನು ಅರಿತ ಯುವಕರ ಗುಂಪೊಂದು ಭಿನ್ನ ಸ್ಟಾರ್ಟ್ ಅಪ್ ಶುರು ಮಾಡಿದೆ.
ರಾಜಸ್ಥಾನದ ಜೋಧಪುರದಲ್ಲಿ ಕೆಲವು ಯುವಕರು ʼಏಕ್ ಅಂತಿಮ್ ಸತ್ಯʼ ಎಂಬ ಸ್ಟಾರ್ಟಪ್ ಆರಂಭಿಸಿದ್ದಾರೆ. ಯಾವುದೇ ವ್ಯಕ್ತಿ ಸತ್ತಾಗ, ಅಳಲು ಆತನ ಕುಟುಂಬಸ್ಥರು ಇವರಿಗೆ ಕರೆ ಮಾಡಬಹುದು. ಕರೆ ನಂತ್ರ ಇವರು ಸ್ಥಳಕ್ಕೆ ಬಂದು, ಮೃತ ದೇಹದ ಮುಂದೆ ಕಣ್ಣೀರಿಡುತ್ತಾರೆ. ಅವರಿಗೆ ಹಣ ನೀಡಬೇಕಾಗುತ್ತದೆ. ಹಣಕ್ಕೆ ತಕ್ಕಂತೆ ಅವರು ಹೆಣದ ಮುಂದೆ ಅತ್ತು ಹೋಗ್ತಾರೆ. ಇಲ್ಲಿ ಬರಿ ಅಳೋ ಜನರು ಮಾತ್ರವಲ್ಲ, ಅಂತ್ಯ ಸಂಸ್ಕಾರದ ವೇಳೆ ಏನೆಲ್ಲ ಮಾಡಬೇಕು ಎಂಬುದನ್ನು ತಿಳಿಸುವ ಬಲ್ಲವರು, ಪಂಡಿತರು ಕೂಡ ಇರುತ್ತಾರೆ.
ಪ್ಯಾಕೇಜ್ ನಲ್ಲಿ ವ್ಯವಹಾರ ನಡೆಸಬೇಕು. ಮೃತರ ಕುಟುಂಬಕ್ಕೆ ಕಂಪನಿಯು 12 ರಿಂದ 15 ದಿನಗಳ ಪೂರ್ಣ ಪ್ಯಾಕೇಜ್ ಅನ್ನು ಒದಗಿಸುತ್ತದೆ. ಇದರಲ್ಲಿ 20 ಮಹಿಳೆಯರು, 10 ಹುಡುಗಿಯರು, 10 ಪುರುಷರು ಮತ್ತು ಹುಡುಗರು, ಪುರೋಹಿತರು ಮತ್ತು ಪೂಜೆ ಮಾಡುವ 10 ಜನರು ಸೇರಿರುತ್ತಾರೆ. ಈ ಪ್ಯಾಕೇಜ್‌ನ ಬೆಲೆ ಅಂದಾಜು 60 ಸಾವಿರ ರೂಪಾಯಿಯಿಂದ ಶುರುವಾಗುತ್ತದೆ. ಬೇಡಿಗೆ ಆಧರಿಸಿ ಬೆಲೆ ಬದಲಾಗುತ್ತದೆ. 1,21,000 ರೂಪಾಯಿಯಿಂದ 1,50,000 ರೂಪಾಯಿವರೆಗೆ ಖರ್ಚು ಬರುತ್ತದೆ.