2000 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಿಂದ ಹೊರಗಿಡಲಾಗಿದೆ. ಆದ್ರೆ ಈಗ್ಲೂ 2000 ರೂಪಾಯಿ ನೋಟುಗಳನ್ನು ಬದಲಿಸಿಕೊಳ್ಳುವ ಅವಕಾಶವಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಗೆ ಹೋಗಿ ನೋಟುಗಳನ್ನು ಬದಲಿಸಿಕೊಳ್ಳಬಹುದು. ಇಷ್ಟು ದಿನ ನಿಧಾನವಾಗಿದ್ದ ವಿನಿಮಯ ಈಗ ಏಕಾಏಕಿ ಬಿರುಸು ಪಡೆದಿದೆ.
ಒಡಿಶಾ ಭುವನೇಶ್ವರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿ ಎದುರು ಪ್ರತಿದಿನ ನೂರಾರು ಜನ ಜಮಾಯಿಸುತ್ತಿದ್ದಾರೆ. 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳವ ಆತುರದಲ್ಲಿದ್ದಾರೆ. ಏಕಾಏಕಿ ಇಷ್ಟೊಂದು ಜನರ ಕೈಗೆ ಎರಡು ಸಾವಿರದ ನೋಟು ಬಂದಿದ್ದು ಹೇಗೆ ಎಂಬ ಅನುಮಾನ ಶುರುವಾಗಿದೆ. ತನಿಖಾ ಸಂಸ್ಥೆಗಳು ಅಲರ್ಟ್ ಆಗಿವೆ.
ಭುವನೇಶ್ವರದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿ ಮುಂದೆ ಕಳೆದ ಮೂರು ದಿನಗಳಿಂದ ಭಾರಿ ಜನಸಂದಣಿ ಕಂಡು ಬಂದಿದೆ. ಪ್ರತಿದಿನ ಸುಮಾರು 700 ಜನರು 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆಂದು ಬ್ಯಾಂಕ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ಪ್ರತಿದಿನ 1 ರಿಂದ 1.5 ಶತಕೋಟಿ ಮೌಲ್ಯದ 2000 ರೂಪಾಯಿ ನೋಟು ವಿನಿಮಯವಾಗ್ತಿದೆ. ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಮೇ 2023 ರಲ್ಲಿ, ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆದು ಹಾಕಿದೆ. ಅಕ್ಟೋಬರ್ 7 ರವರೆಗೆ ಬ್ಯಾಂಕ್ ನೋಟು ವಿನಿಮಯಕ್ಕೆ ಅವಕಾಶ ನೀಡಿತ್ತು. ಗಡುವು ಮುಗಿದ ನಂತರವೂ ರಿಸರ್ವ್ ಬ್ಯಾಂಕ್ ತನ್ನ ಕಚೇರಿಗಳಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ.