alex Certify ಈ ರಾಶಿಯವರಿಗಿದೆ ಇಂದು ಉದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಉದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ಲಾಭ

ಮೇಷ : ವೃತ್ತಿ ಜೀವನವು ನೆಮ್ಮದಿ ಎನಿಸಲಿದೆ. ಮಕ್ಕಳ ವಿಚಾರದಲ್ಲಿ ನೀವು ಕೈಗೊಳ್ಳುವ ನಿರ್ಧಾರವು ಭವಿಷ್ಯದಲ್ಲಿ ಉತ್ತಮ ಎನಿಸಲಿದೆ. ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಸಣ್ಣ ಜಗಳ ಉಂಟಾಗುವ ಸಾಧ್ಯತೆ ಇದೆ. ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಎಚ್ಚರಿಕೆ ಇರಲಿ.

ವೃಷಭ: ಧಾನ್ಯಗಳ ವ್ಯಾಪಾರಿಗಳು ಇಂದು ಹೆಚ್ಚಿನ ಲಾಭ ಗಳಿಸಲಿದ್ದಾರೆ. ಆರ್ಥಿಕ ಸಂಕಷ್ಟವನ್ನು ಪರಿಹರಿಸಿಕೊಳ್ಳಲು ಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ತಕ್ಕ ಮಟ್ಟದ ಯಶಸ್ಸು ಸಿಗಲಿದೆ.

ಮಿಥುನ : ಸರ್ಕಾರಿ ಉದ್ಯೋಗಿಗಳಿಗೆ ದಿಢೀರ್ ವರ್ಗಾವಣೆ ಆಗಬಹುದು. ಧಾರ್ಮಿಕ ಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಳ್ಳುವಿರಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವುದು ಅನಿವಾರ್ಯ ಎನಿಸಲಿದೆ. ಒಮ್ಮೆ ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯಬೇಡಿ.

ಕಟಕ : ನೀವು ಪ್ರಯತ್ನ ಪಡದೇ ಯಾವುದು ನಿಮಗೆ ದಕ್ಕುವುದಿಲ್ಲ. ಹೀಗಾಗಿ ಅದೃಷ್ಟವನ್ನು ನಂಬಿ ಕೂರುವ ಬದಲು ಶ್ರಮ ವಹಿಸಿ. ಉದ್ಯಮಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಿ. ಇಂದು ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವಿರಿ. ವಾಣಿಜ್ಯ ವ್ಯವಹಾರವು ಲಾಭ ತಂದುಕೊಡಲಿದೆ.

ಸಿಂಹ : ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿದ್ದೀರಿ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ರಕ್ತದಾನದಂತಹ ಶಿಬಿರಗಳನ್ನು ನಡೆಸಲಿದ್ದೀರಿ. ವೈವಾಹಿಕ ಸಂಬಂಧವೇ ಕೂಡಿ ಬರದೇ ಹತಾಶರಾಗಿದ್ದ ನಿಮಗೆ ಇಂದು ಶುಭ ಸುದ್ದಿ ಕೇಳಲಿದೆ.

ಕನ್ಯಾ: ವಿದೇಶಿ ಹೂಡಿಕೆದಾರರು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಉದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ಲಾಭ ಎದುರಾಗಲಿದೆ. ಅಂದುಕೊಂಡ ಕೆಲಸಗಳು ಸರಾಗವಾಗಿ ನೆರವೇರಲಿದೆ. ಕುಲದೇವರ ಸೇವೆ ಮಾಡುವುದರಲ್ಲಿ ನೆಮ್ಮದಿ ಕಾಣಲಿದೆ.

ತುಲಾ: ವ್ಯಾಪಾರಿಗಳಿಗೆ ಇಂದಿನ ಪರಿಸ್ಥಿತಿಯು ಲಾಭದಾಯಕವಾಗಿ ಇರಲಿದೆ. ದೂರ ಪ್ರಯಾಣದಿಂದ ಹೊಸ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ವೆಚ್ಚ ಹೆಚ್ಚಾಗಲಿದೆ. ಸಂಗಾತಿಯು ನಿಮ್ಮೆಲ್ಲ ಕಾರ್ಯಗಳಿಗೆ ಬೆಂಬಲ ನೀಡಲಿದ್ದಾರೆ.

ವೃಶ್ಚಿಕ : ಜವಳಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಮಕ್ಕಳ ವ್ಯಾಸಂಗ ವಿಚಾರವಾಗಿ ತಲೆ ಕೆಡಿಸಿಕೊಳ್ಳಲಿದ್ದೀರಿ. ದಾಂಪತ್ಯದ ವಿಚಾರದಲ್ಲಿ ಆಗಾಗ ಸಮಸ್ಯೆಗಳು ಎದುರಾಗಲಿದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಧನು : ಕೃಷಿಕರಿಗೆ ಇಂದು ಲಾಭವಿದೆ. ಸ್ತ್ರೀಯರು ಇಂದು ಧನಲಾಭ ಗಳಿಸಲಿದ್ದಾರೆ. ವ್ಯವಹಾರ ನಿಮಿತ್ತ ಪ್ರಯಾಣ ಬೆಳೆಸುವ ಮುನ್ನ ಎಚ್ಚರಿಕೆಯಿಂದಿರಿ. ಭೂ ವ್ಯವಹಾರಗಳಿಂದ ಲಾಭ ನಿರೀಕ್ಷಿಸಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.

ಮಕರ : ತಂದೆ ಅಥವಾ ತಾಯಿಯ ಆರೋಗ್ಯ ಹದಗೆಡುವುದರಿಂದ ಇಂದು ಆಸ್ಪತ್ರೆಗೆ ಭೇಟಿ ನೀಡಬೇಕಾಗಿ ಬರಲಿದೆ. ನಿಮ್ಮ ಸ್ನೇಹಿತರ ವೃತ್ತಿರಂಗದಲ್ಲಿಂದು ದೊಡ್ಡ ಬಿರುಗಾಳಿಯೇ ಏಳಲಿದೆ. ಅಧಿಕಾರಿಗಳಿಗೆ ಇಂದು ಬಡ್ತಿ ಸಾಧ್ಯತೆ. ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಇಂದು ಹೊಸ ಮಾರ್ಗವೊಂದು ಕಾಣಲಿದೆ.

ಕುಂಭ : ಗುತ್ತಿಗೆ ಆಧಾರಿತ ಕೆಲಸಗಾರರಿಗೆ ಇಂದು ಲಾಭವಿದೆ. ಯಂತ್ರೋಪಕರಣಗಳನ್ನು ಖರೀದಿ ಮಾಡಲಿದ್ದೀರಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ವಿವಾಹದ ವಿಚಾರದಲ್ಲಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವುದು ಸೂಕ್ತ.

ಮೀನ : ಸೋಮಾರಿತನವನ್ನು ದೂರ ಮಾಡಿಕೊಂಡರೆ ನಿಮ್ಮ ಯಶಸ್ಸಿಗೆ ಲಗಾಮು ಹಾಕುವವರು ಯಾರೂ ಇಲ್ಲ . ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಸಂಗಾತಿಯು ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...