alex Certify ರಾಜ್ಯದ ʻಪರಿಶಿಷ್ಟ ವರ್ಗʼದವರಿಗೆ ಮಹತ್ವದ ಮಾಹಿತಿ : ಇಂದು ʻಭೂ ಒಡೆತನ, ಸ್ವಾವಲಂಬಿ ಸಾರಥಿʼ ಸೇರಿ ಈ ಯೋಜನೆಗಳಿಗೆ ಅರ್ಜಿ ಸಲಿಸಲು ಕೊನೆಯ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ʻಪರಿಶಿಷ್ಟ ವರ್ಗʼದವರಿಗೆ ಮಹತ್ವದ ಮಾಹಿತಿ : ಇಂದು ʻಭೂ ಒಡೆತನ, ಸ್ವಾವಲಂಬಿ ಸಾರಥಿʼ ಸೇರಿ ಈ ಯೋಜನೆಗಳಿಗೆ ಅರ್ಜಿ ಸಲಿಸಲು ಕೊನೆಯ ದಿನ

 

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರವು ಪರಿಶಿಷ್ಟ ವರ್ಗದವರಿಗೆ ಹಲವು ಯೋಜನೆಗಳಡಿ ಅರ್ಜಿ ಆಹ್ವಾನಿಸಿದ್ದು, ಈ ಯೋಜನೆಗಳ ಪೈಕಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಸ್ವಾವಲಂಬಿ ಸಾರಥಿ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್‌ 15 ರ ಇಂದು ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ ಯೋಜನೆಗಳ ಲಾಭ ಪಡೆಯಬಹುದು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಸ್ವಯಂ ಉದ್ಯೋಗ ಮಾಡುವವರು ಮತ್ತು ರೈತರು ಮತ್ತು ವ್ಯಾಪಾರ ಮಾಡುವವರು ಈ ಒಂದು ಯೋಜನೆ ಅಡಿಯಲ್ಲಿ ಸಾಲ ಮತ್ತು ಸಹಾಯಧನ ಪಡೆಯಬಹುದು.

ಸ್ವಯಂ ಉದ್ಯೋಗ ನೇರಸಾಲ ಯೋಜನೆ

ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ವಿವಿಧ ಆರ್ಥಿಕ ಗಳಿಕೆಯ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು, ಸಣ್ಣ ಆದಾಯ ಗಳಿಸಲು ಆರ್ಥಿಕ ಚಟುವಟಿಕೆಗಳಿಗಾಗಿ ನಿಗಮಗಳಿಂದ ನೇರ ಸಾಲ (ಗರಿಷ್ಟ ವೆಚ್ಚ ರೂ.1 ಲಕ್ಷ, ಅದರಲ್ಲಿ ಶೇ.50 ಸಾಲ ಮತ್ತು ಶೇ.50 ಸಹಾಯಧನ (ಶೇಕಡ 4ರಷ್ಟು ಬಡ್ಡಿ ದರ).

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ

(ಬ್ಯಾಂಕುಗಳ ಸಹಯೋಗದೊಂದಿಗೆ) ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಘಟಕ ವೆಚ್ಚದ ಶೇ70.ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.1 ಲಕ್ಷ, ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.2 ಲಕ್ಷ.

ಸ್ವಾವಲಂಬಿ ಸಾರಥಿ 

ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ. ಘಟಕ ವೆಚ್ಚದ ಶೇ.75ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.4 ಲಕ್ಷ. ಮೈಕ್ರೋ ಕ್ರೆಡಿಟ್ ಯೋಜನೆ (ನೋಂದಾಯಿತ ಸ್ವ-ಸಹಾಯ ಮಹಿಳಾ ಸಂಘಗಳು): ಮಹಿಳೆಯರಲ್ಲಿ ಗುಂಪು ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿ ಆದಾಯ ಗಳಿಸಲು ಅನುಕೂಲವಾಗುವಂತೆ ಕನಿಷ್ಟ 10 ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ರೂ.2.50 ಲಕ್ಷಗಳನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ರೂ.1.50 ಲಕ್ಷ ಸಹಾಯಧನ ಮತ್ತು ರೂ.1 ಲಕ್ಷ ಸಾಲ(ಶೇಕಡ 4ರಷ್ಟು ಬಡ್ಡಿ ದರ).

ಗಂಗಾ ಕಲ್ಯಾಣ ಯೋಜನೆ

1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್ಸೆಟ್ ಅಳವಡಿಸಿ ವಿದ್ಯದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ ರೂ.3.75 ಲಕ್ಷ (ಇದರಲ್ಲಿ ರೂ.50 ಸಾವಿರ ಸಾಲವೂ ಸೇರಿರುತ್ತದೆ.)

ಭೂ ಒಡೆತನ ಯೋಜನೆ

ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಟ ಒಂದು ಎಕರೆ ಭಾಗಾಯ್ತು ಅಥವಾ ಎರಡು ಏಕರೆ ಖುಷ್ಕಿ ಜಮೀನನ್ನು ಖರೀದಿಸಿ ಕೊಡಲಾಗುವುದು. ಘಟಕ ವೆಚ್ಚ ರೂ.25 ಲಕ್ಷ/ 20 ಲಕ್ಷ ಸಹಾಯಧನ ಶೇ.50. ಸಾಲ ಶೇ.50 (ಶೇಕಡ 6 ರಷ್ಟು ಬಡ್ಡಿದರ).

ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್

ರೇಷನ್ ಕಾರ್ಡ್

ಜಾತಿ ಪ್ರಮಾಣ ಪತ್ರ

ಆದಾಯ ಪ್ರಮಾಣ ಪತ್ರ

ಯೋಜನೆ ವಿವರ

ಪಾಸ್ಪೋರ್ಟ್ ಗಾತ್ರದ ಫೋಟೋ

ಅರ್ಜಿ ಸಲ್ಲಿಸಲು ಅರ್ಹತೆಗಳು

ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಂಪಿಗೆ ಸೇರಿದವರಾಗಿರಬೇಕು

ಅರ್ಜಿದಾರರ ಗ್ರಾಮೀಣ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 1.5 ಲಕ್ಷ ಮೀರಿರಬಾರದು

ಅರ್ಜಿದಾರರು ಪಟ್ಟಣ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 2 ಲಕ್ಷ  ಮೀರಿರಬಾರದು

ಅರ್ಜಿದಾರರು ವಯಸ್ಸು 21ರಿಂದ 60 ವರ್ಷ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ವೆಬ್ಸೈಟ್ https://adcl.karnataka.gov.in ಮೂಲಕ ಪಡೆದುಕೊಳ್ಳುವುದು. ಫಲಾಪೇಕ್ಷಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಮತ್ತು ದಾಖಲಾತಿಗಳನ್ನು ಸುವಿದಾ ತಂತ್ರಾಂಶದ ವೆಬ್ಸೈಟ್ ವಿಳಾಸ: https://sevasindhuservices.karnataka.gov.in ಮೂಲಕ ಅರ್ಜಿಗಳನ್ನು ಅಪ್ಲೋಡ್ ಮಾಡಲು ಡಿಸೆಂಬರ್, 15 ರ ಇಂದು ಮಾತ್ರ ಅವಕಾಶ ಇರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...