ಪಿಂಚಣಿದಾರರೇ ಗಮನಿಸಿ : ನ. 30 ರೊಳಗೆ ʻಜೀವನ ಪ್ರಮಾಣ ಪತ್ರʼ ಸಲ್ಲಿಸದಿದ್ದರೆ ಬರಲ್ಲ ಪಿಂಚಣಿ!

ಬೆಂಗಳೂರು :  ಪಿಂಚಣಿದಾರರು ಜೀವ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 30ರವರೆಗೂ ಕಾಲಾವಕಾಶ ಇದೆ. ಇನ್ನು ಮೂರು ದಿನ ಮಾತ್ರವೇ ಬಾಕಿ ಇದೆ. ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರದ ಎಲ್ಲಾ ಉದ್ಯೋಗಿಗಳೂ ಕೂಡ ಲೈಫ್ ಸರ್ಟಿಫಿಕೇಟ್ ಕೊಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜೀವನ್ ಪ್ರಮಾಣಪತ್ರ ಸಲ್ಲಿಸದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ ಬಂದ್‌ ಆಗಲಿದೆ.

ಜೀವನ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ ಸಿಗುವುದಿಲ್ಲ. ಪ್ರತಿ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ, ಎಲ್ಲಾ ಪಿಂಚಣಿದಾರರು ತಮ್ಮ ಬದುಕುಳಿಯುವಿಕೆಯ ಪ್ರಮಾಣಪತ್ರಗಳನ್ನು ಒದಗಿಸಬೇಕಾಗುತ್ತದೆ.

ನವೆಂಬರ್ 30ರೊಳಗೆ ಜೀವ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತಗೊಳ್ಳುತ್ತದೆ. ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಳ್ಳುತ್ತದೆ. ಮುಂಬರುವ ತಿಂಗಳ ಪಿಂಚಣಿ ಸಿಗುವುದಿಲ್ಲ. ನೀವು ತಡವಾಗಿ ಲೈಫ್ ಸರ್ಟಿಫಿಕೇಟ್ ಕೊಟ್ಟರೂ ಪಿಂಚಣಿ ಮತ್ತೆ ಸಕ್ರಿಯಗೊಳ್ಳುತ್ತದೆ. ಅದರ ಮುಂದಿನ ತಿಂಗಳಲ್ಲಿ ಬಾಕಿ ಸೇರಿಸಿ ಪಿಂಚಣಿ ಬರುತ್ತದೆ.

ಈ ವಿಧಾನಗಳ ಮೂಲಕ ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು

   ಬ್ಯಾಂಕ್ / ಅಂಚೆ ಕಚೇರಿಗೆ ಹೋಗಿ ಮತ್ತು ಜೀವನ ಪ್ರಮಾಣಪತ್ರವನ್ನು ನೀವೇ ಸಲ್ಲಿಸಿ

– ಉಮಂಗ್ ಮೊಬೈಲ್ ಅಪ್ಲಿಕೇಶನ್ ಮೂಲಕ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು

– ಮುಖದ ದೃಢೀಕರಣದ ಸಹಾಯದಿಂದ ಜೀವನ ಪ್ರಮಾಣಪತ್ರವನ್ನು ಸಲ್ಲಿಸಿ

– ಜೀವನ್ ಪ್ರಮಾನ್ ಪೋರ್ಟಲ್ ಮೂಲಕ ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಿ

– ಮನೆ ಬಾಗಿಲಿಗೆ ಬ್ಯಾಂಕಿಂಗ್ ಮೂಲಕ ಲೈಫ್ ಸರ್ಟಿಫಿಕೇಟ್ ಸಲ್ಲಿಸಿ

– ಆಧಾರ್ ಆಧಾರಿತ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಿ

– ಪೋಸ್ಟ್ ಮ್ಯಾನ್ ಸೇವೆಯ ಮೂಲಕ ನೀವು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read