ಭಾರತವು, ಟೋಗೊ ಮತ್ತು ಸೆನೆಗಲ್ ಜೊತೆಗೆ 80 ನೇ ಸ್ಥಾನದಲ್ಲಿದೆ. ಕಳೆದ ಬಾರಿಗಿಂತ ಈ ವರ್ಷ 5 ಸ್ಥಾನ ಮೇಲೇರಿದೆ. ಭಾರತವು ಈಗ ವಿಶ್ವದ 57 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಒದಗಿಸುತ್ತದೆ. 2022 ರ ಶ್ರೇಯಾಂಕದಲ್ಲಿ ಭಾರತವು 87 ನೇ ಸ್ಥಾನದಲ್ಲಿತ್ತು. ಕಳೆದ ವರ್ಷದಿಂದ ಏಳು ಸ್ಥಾನಗಳ ಗಮನಾರ್ಹ ಸುಧಾರಣೆಯನ್ನು ಕಂಡಿದೆ. ವರದಿಯ ಪ್ರಕಾರ ಭಾರತವು ಭೂತಾನ್, ಮಾಲ್ಡೀವ್ಸ್ ಮತ್ತು ನೇಪಾಳ ಸೇರಿದಂತೆ 57 ದೇಶದಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. 170 ಕ್ಕೂ ಹೆಚ್ಚು ಇತರ ದೇಶಗಳನ್ನು ಪ್ರವೇಶಿಸಲು ವೀಸಾ ಪ್ರವೇಶದ ಅಗತ್ಯವಿದೆ.
ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕ ಎಂದರೇನು ?
ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕವು ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (IATA) ಯ ವಿಶೇಷ ಮತ್ತು ಅಧಿಕೃತ ಡೇಟಾವನ್ನು ಆಧರಿಸಿದೆ. ಇದು ವಿಶ್ವದ ಅತಿದೊಡ್ಡ ಮತ್ತು ನಿಖರವಾದ ಪ್ರಯಾಣದ ಮಾಹಿತಿಯ ಡೇಟಾಬೇಸ್ ಅನ್ನು ನಿರ್ವಹಿಸುತ್ತದೆ.