
ಕಬ್ಬಡ್ಡಿ ಎಂದಾಕ್ಷಣ ನೆನಪಾಗುವ ಮೊದಲ ಹೆಸರು ರೆಕಾರ್ಡ್ಗಳ ಸರದಾರ ಪರ್ದೀಪ್ ನರ್ವಾಲ್, ಹಲವಾರು ವರ್ಷಗಳಿಂದ ಕಬ್ಬಡಿಯಲ್ಲಿ ಸಾಧನೆ ಮಾಡಿರುವ 26 ವರ್ಷದ ಪರ್ದೀಪ್ ನರ್ವಾಲ್ ನಿನ್ನೆಯ ಪಂದ್ಯದಲ್ಲಿ 1600 ರೈಡಿಂಗ್ ಪಾಯಿಂಟ್ ಗಳ ಗಡಿ ಮುಟ್ಟಿದ್ದಾರೆ. ಪ್ರೊ ಕಬ್ಬಡ್ಡಿ ಇತಿಹಾಸದಲ್ಲೇ 1600 ರೈಡಿಂಗ್ ಪಾಯಿಂಟ್ ಗಳಿಸಿರುವ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಯುಪಿ ಯೋಧಾಸ್ ನಿನ್ನೆಯ ಪಂದ್ಯದಲ್ಲಿ ಕೇವಲ ಎರಡೇ ಅಂಕಗಳಿಂದ ಬೆಂಗಳೂರು ಬುಲ್ಸ್ ಜೊತೆ ಸೋಲು ಕಂಡಿದೆ. ಪರ್ದೀಪ್ ನರ್ವಾಲ್ ತಮ್ಮ ತಂಡಕ್ಕೆ ಸಾಕಷ್ಟು ರೈಡಿಂಗ್ ಪಾಯಿಂಟ್ ಗಳನ್ನು ತಂದು ಕೊಡುವ ಮೂಲಕ ಕೊನೆಯ ಹಂತದವರೆಗೂ ಒಳ್ಳೆಯ ಹೋರಾಟ ಕೊಟ್ಟಿದ್ದಾರೆ.
