ಪಪ್ಪಾಯ ಹಣ್ಣು ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಉಪಯೋಗವಾಗುವಂತಹ ಅನೇಕ ಅಂಶಗಳನ್ನು ಹೊಂದಿದೆ ಎಂಬುದು ನಮಗೆಲ್ಲಾ ತಿಳಿದಿದೆ.
ಪಪ್ಪಾಯವನ್ನು ಚರ್ಮದ ಮೇಲೆ ಲೇಪಿಸುವುದರಿಂದ ಇದರಲ್ಲಿರುವ ‘ಪಾಪೈನ್’ ಎಂಬ ಎನ್ಜೈಮ್ (ಕಿಣ್ವ) ಡೆಡ್ ಸೆಲ್ ಗಳನ್ನು ತೆಗೆದು ಹಾಕುವುದರಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆ್ಯಂಟಿಆಕ್ಸಿಡೆಂಟ್ಸ್, ಫೋಲೇಟ್, ಪ್ಯಾನ್ಥೋಥೆನಿಕ್ ಆ್ಯಸಿಡ್, ಪೊಟ್ಯಾಷಿಯಂ, ಮೆಗ್ನೀಷಿಯಂ ಮುಂತಾದವುಗಳಿಂದ ತ್ವಚೆಗೆ ನೈಸರ್ಗಿಕವಾದ ರೀತಿಯಲ್ಲಿ ಪೋಷಣೆ ದೊರೆತು, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಒಂದು ಬಟ್ಟಲಿನಲ್ಲಿ ಕೆಲವು ಪಪ್ಪಾಯಿ ಪೀಸ್ ಗಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ, ಒಂದು ಚಮಚ ಅರಿಶಿಣದ ಪುಡಿ ಮತ್ತು ಒಂದು ಚಮಚ ಶ್ರೀಗಂಧದ ಪುಡಿ, ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿಯಲ್ಲಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈಗ ಇದನ್ನು ಮುಖಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಶ್ರೀಗಂಧ ಮತ್ತು ಮುಲ್ತಾನಿ ಮಿಟ್ಟಿ ತ್ವಚೆಯಲ್ಲಿರುವ ಹೆಚ್ಚುವರಿ ಜಿಡ್ಡನ್ನು ಹೀರಿಕೊಳ್ಳುತ್ತದೆ ಮತ್ತು ಸ್ವಚ್ಛವಾದ ಮೃದುವಾದ ಹಾಗೇ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.