
ರಾಜಸ್ಥಾನದ ಪಾಲಿಯಲ್ಲಿ ಬಾಂದ್ರಾ ಟರ್ಮಿನಸ್ ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್‌ನ(ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್ ಪ್ರೆಸ್) 11 ಬೋಗಿಗಳು ಸೋಮವಾರ ಬೆಳಗ್ಗೆ ಹಳಿತಪ್ಪಿವೆ.
ಮಾಹಿತಿ ಪ್ರಕಾರ, ಬೆಳಗಿನ ಜಾವ 3.27ಕ್ಕೆ ಅಪಘಾತ ಸಂಭವಿಸಿದೆ. ಜೋಧ್‌ಪುರ ವಿಭಾಗದ ರಾಜ್‌ಕಿವಾಸ್-ಬೊಮದ್ರಾ ವಿಭಾಗದಲ್ಲಿ ಬೋಗಿಗಳು ಹಳಿತಪ್ಪಿವೆ ಎಂದು ವಾಯುವ್ಯ ರೈಲ್ವೆಯ ಸಿಪಿಆರ್ಒ ತಿಳಿಸಿದ್ದಾರೆ. ಆದರೆ, ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವಾಯುವ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಇತರ ಉನ್ನತ ಅಧಿಕಾರಿಗಳು ರೈಲ್ವೆಯ ಜೈಪುರ ಪ್ರಧಾನ ಕಛೇರಿಯಲ್ಲಿ ಈ ವಿಷಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹೆಚ್ಚಿನ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಆಗಮಿಸಲಿದ್ದಾರೆ. ಎಂದು ಸಿಪಿಆರ್ಒ ಹೇಳಿದರು.
ಇದರೊಂದಿಗೆ ರೈಲ್ವೆಯಿಂದ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಪ್ರಯಾಣಿಕರು ಮತ್ತು ಅವರ ಸಂಬಂಧಿಕರು ಯಾವುದೇ ಮಾಹಿತಿಗಾಗಿ 138 ಮತ್ತು 1072 ಅನ್ನು ಸಂಪರ್ಕಿಸಬಹುದು ಎಂದು ವಾಯುವ್ಯ ರೈಲ್ವೆಯ ಸಿಪಿಆರ್ಒ ತಿಳಿಸಿದ್ದಾರೆ.
ಜೋಧಪುರ ಸಹಾಯವಾಣಿ ಸಂಖ್ಯೆ
0291- 2654979(1072)
0291- 2654993(1072)
0291- 2624125
0291- 2431646
ಪಾಲಿ ಮಾರ್ವಾರ್ ಸಹಾಯವಾಣಿ ಸಂಖ್ಯೆ
0293- 2250324