
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೀರಾ ಭಯಂದರ್-ವಸಾಯಿ ವಿರಾರ್ ಪೊಲೀಸ್ ಕಮಿಷನರೇಟ್‌ನ ಮಾನವ ಕಳ್ಳಸಾಗಣೆ ವಿರೋಧಿ ಘಟಕ ಆತನನ್ನು ಬಂಧಿಸಿದೆ.
ಪುರುಷನೊಬ್ಬ ಮಹಿಳೆಯರನ್ನು ಸೆಕ್ಸ್ ರಾಕೆಟ್‌ಗೆ ಬಲವಂತಪಡಿಸುತ್ತಿದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸರು ನಲಾಸೋಪಾರಾದ ರೇಂಜ್ ನಾಕಾದಲ್ಲಿ ಬಲೆ ಬೀಸಿ ಆತನನ್ನು ಬಂಧಿಸಿದ್ದಾರೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಸಂತೋಷ್ ಚೌಧರಿ ತಿಳಿಸಿದ್ದಾರೆ.
ಈತ ನೀಡಿದ ಮಾಹಿತಿ ಮೇರೆಗೆ ಸ್ಥಳೀಯ ಮಾಲ್‌ನಲ್ಲಿ ದಾಳಿ ನಡೆಸಿದ ಪೊಲೀಸರು ಸೆಕ್ಸ್ ರ್ಯಾಕೆಟ್‌ನಿಂದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿ ವಿರುದ್ಧ ವಲಿವ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.