
ಬೆಂಗಳೂರು: ಬೆಂಗಳೂರಿನಲ್ಲಿ ಪಾಕ್ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರೂವಾರಿಯೊಬ್ಬನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಪರ್ವೇಜ್ ಬಂಧಿತ ಆರೋಪಿ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ಈತನೇ ಕಾರಣ ಎಂದು ತಿಳಿದುಬಂದಿದೆ. ಭಾರತೀಯ ದಾಖಲೆಗಳನ್ನು ಬಂಧಿತ ಪಾಕ್ ಪ್ರಜೆಗಳಿಗೆ ಈತನೇ ಮಾಡಿಕೊಟ್ಟಿದ್ದ. ಈತ ಯೂನಸ್ ಅಲ್ಗೋರ್ ಧರ್ಮ ಗುರುಗಳ ಪ್ರವಚನಗಳ ಪ್ರಚಾರಕ. ಬಂಧಿತರೆಲ್ಲರೂ ಈತನ ಜೊತೆ ಸಂಪರ್ಕದಲ್ಲಿ ಇದ್ದರು. ಈತನ ಸೂಚನೆ ಮೇರೆಗೆ ಧರ್ಮಗುರುಗಳ ಪ್ರವಚನಗಳನ್ನು ಭಾರತದಲ್ಲಿ ಮಾಡುತ್ತಿದ್ದರು ಎನ್ನಲಾಗಿದೆ. ಜಿಗಣಿ ಪೊಲೀಸರು ಪರ್ವೇಜ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.