ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಬಡ ಜನತೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ದಿನ ಬಳಕೆಯ ವಸ್ತುಗಳ ಬೆಲೆ ಮುಗಿಲು ಮುಟ್ಟಿದ್ದು, ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಅಧಿಕಾರಸ್ಥರು ಹೈರಾಣಾಗಿದ್ದಾರೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎರಡು ವಿಡಿಯೋಗಳು ಪಾಕಿಸ್ತಾನದಲ್ಲಿನ ಪ್ರಸಕ್ತ ಪರಿಸ್ಥಿತಿಯನ್ನು ಬಿಂಬಿಸುತ್ತಿವೆ. ಸಬ್ಸಿಡಿ ದರದಲ್ಲಿ ವಿತರಿಸುತ್ತಿರುವ ಆಹಾರ ಪದಾರ್ಥವನ್ನು ಪಡೆಯಲು ಸಾರ್ವಜನಿಕರು ಹೊಡೆದಾಡುತ್ತಿರುವುದು ಈ ವಿಡಿಯೋದಲ್ಲಿದೆ.
ಆಹಾರ ಪದಾರ್ಥ ಪಡೆಯಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆದಿದ್ದು, ಆಗ ವ್ಯಕ್ತಿಯೊಬ್ಬ ಮತ್ತೊಬ್ಬನನ್ನು ನೇರವಾಗಿ ತೆರೆದ ಚರಂಡಿಗೆ ತಳ್ಳಿದ್ದಾನೆ. ಹಿಂದೆ ನಿಂತಿದ್ದ ಮತ್ತೊಬ್ಬನಿಗೂ ಇದೇ ಪರಿಸ್ಥಿತಿ ಬಂದಿದೆ.
ಮತ್ತೊಂದು ವಿಡಿಯೋದಲ್ಲಿ ಆಹಾರ ಪದಾರ್ಥಕ್ಕಾಗಿ ಇಬ್ಬರು ದೊಡ್ಡದಾಗಿ ಜಗಳವಾಡುತ್ತಿದ್ದು, ಇದೇ ಸಮಯ ಸಾಧಿಸಿದ ಮತ್ತೊಬ್ಬ ಅದನ್ನು ಎತ್ತಿಕೊಂಡು ಹೋಗಲು ನೋಡುತ್ತಿದ್ದಾನೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/dheerajsharmads/status/1613469976828182528?ref_src=twsrc%5Etfw%7Ctwcamp%5Etweetembed%7Ctwterm%5E1613469976828182528%7Ctwgr%5Ef0fbab5131a0f2722a4a24c2acb1b49ca2a0cd6a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fopindiaenglish-epaper-opinden%2Fpakistanmanpushesanotherintoopensewageduringflourdistributionfightoverasackofwheatwatch-newsid-n461809228%3Fs%3Dauu%3D0x61fbe37283098391ss%3Dwspsm%3DY
https://twitter.com/surajitdasgupta/status/1613402863639859200?ref_src=twsrc%5Etfw%7Ctwcamp%5Etweetembed%7Ctwterm%5E1613402863639859200%7Ctwgr%5Ef0fbab5131a0f2722a4a24c2acb1b49ca2a0cd6a%7Ctwcon%5Es1_&ref_ur