alex Certify ‘ಓವರ್ ಟೇಕ್’ ಅಪಘಾತ: ಹೆಚ್ಚಿನ ಪರಿಹಾರ ನಿರಾಕರಿಸುವಂತಿಲ್ಲ; ‘ಸುಪ್ರೀಂ ಕೋರ್ಟ್’ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಓವರ್ ಟೇಕ್’ ಅಪಘಾತ: ಹೆಚ್ಚಿನ ಪರಿಹಾರ ನಿರಾಕರಿಸುವಂತಿಲ್ಲ; ‘ಸುಪ್ರೀಂ ಕೋರ್ಟ್’ ಮಹತ್ವದ ತೀರ್ಪು

ನವದೆಹಲಿ: ಓವರ್ ಟೇಕ್ ಮಾಡಿ ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಕರಣದಲ್ಲಿ ಹೆಚ್ಚಿನ ಪರಿಹಾರ ನೀಡಲು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ದೇಶದ ರಸ್ತೆಗಳಲ್ಲಿ ಓವರ್ ಟೇಕ್ ದೈನಂದಿನ ಘಟನೆಯಾಗಿದ್ದು, ಯಾವಾಗಲೂ ದುಡುಕಿನ ಚಾಲನೆಯೇ ಆಗಿರಬೇಕಿಲ್ಲವೆಂದು ಸುಪ್ರೀಂ ಕೋರ್ಟ್ ವಿಮಾ ಕಂಪನಿಗಳಿಗೆ ಹೇಳಿದೆ. 30 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಪತ್ನಿ ಕಳೆದುಕೊಂಡ ವ್ಯಕ್ತಿಗೆ ಪರಿಹಾರದ ಮೊತ್ತವನ್ನು ಸುಪ್ರೀಂಕೋರ್ಟ್ ಹೆಚ್ಚಳ ಮಾಡಿದೆ.

ಓವರ್‌ಟೇಕ್ ಮಾಡುವುದು ಭಾರತೀಯ ರಸ್ತೆಗಳಲ್ಲಿ “ದೈನಂದಿನ ಘಟನೆ”ಯಾಗಿದೆ ಎಂದು ಸುಪ್ರೀಂ ಕೋರ್ಟ್ 30 ವರ್ಷಗಳ ಹಿಂದೆ ಟ್ರಾಕ್ಟರ್‌ಗೆ ಮುಖಾಮುಖಿ ಡಿಕ್ಕಿಯಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡ ವ್ಯಕ್ತಿಗೆ ಅಪಘಾತ ಪರಿಹಾರವನ್ನು ಹೆಚ್ಚಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರ ಪೀಠವು ತಿಳಿಸಿದೆ. ತಮ್ಮ ಪತ್ನಿಯ ಸಾವಿಗೆ ಕಾರಣವಾದ ನಿರ್ಲಕ್ಷ್ಯಕ್ಕೆ ವ್ಯಕ್ತಿ ಕಾರಣರಾಗಿದ್ದಾರೆ ಎಂಬ ವಾದ ತಳ್ಳಿಹಾಕಿದೆ.

ಮೋಟಾರು ಅಪಘಾತಗಳ ನ್ಯಾಯ ಮಂಡಳಿ ಪ್ರಕಟಿಸಿದ್ದ 1.01 ಲಕ್ಷ ರೂ. ಪರಿಹಾರವನ್ನು 11.25 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ. ವ್ಯಾಪಾರಿಯಾಗಿದ್ದ ಪ್ರೇಮಲಾಲ್ ಆನಂದ್ ಮತ್ತು ಅವರ ಪತ್ನಿ ಸ್ನೇಹಿತನ ಭೇಟಿಯಾಗಲು ಬೈಕ್ ನಲ್ಲಿ ನೋಯ್ಡಾಗೆ ಪ್ರಯಾಣಿಸುತ್ತಿದ್ದಾಗ ಮೆಹರೋಲಿ ಸಮೀಪ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಪತ್ನಿ ಮೃತಪಟ್ಟು ಪ್ರೇಮಲಾಲ್ ಆನಂದ್ ಗಂಭೀರವಾಗಿ ಗಾಯಗೊಂಡಿದ್ದರು.

ವ್ಯಕ್ತಿಯೊಬ್ಬ ತನ್ನ ಮುಂದಿನ ವಾಹನ ಹಿಂದಿಕ್ಕಲು ಪ್ರಯತ್ನಿಸಿದ್ದ ಮಾತ್ರಕ್ಕೆ ಅದನ್ನು ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆ ಎಂದು ಹೇಳುವಂತಿಲ್ಲ. ಅವರು ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದು, ಓವರ್ ಟೇಕಿಂಗ್ ರಸ್ತೆಗಳಲ್ಲಿ ನಡೆಯುವ ದೈನಂದಿನ ಘಟನೆಯಾಗಿದೆ. ಪ್ರೇಮಲಾಲ್ ಅನಂದ್ ಕೂಡ ಇದನ್ನೇ ಮಾಡಿದ್ದಾರೆ. ಅವರು ಸ್ವತಃ ಗಾಯಗೊಂಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ಹೀಗಾಗಿ ಓವರ್ ಟೇಕಿಂಗ್ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಕರಣದಲ್ಲಿ ಹೆಚ್ಚಿನ ಪರಿಹಾರ ನೀಡಲು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...