ಚಿತ್ರಮಂದಿರಗಳಲ್ಲಿ ಇದ್ದಂತೆ ಇನ್ನು ಮುಂದೆ ಓ ಟಿ ಟಿ ವೇದಿಕೆಗಳಲ್ಲೂ ತಂಬಾಕು ವಿರೋಧಿ ಎಚ್ಚರಿಕೆ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕೆಂದು ಕೇಂದ್ರ ಸರ್ಕಾರ ಹೊಸದಾಗಿ ಮಾರ್ಗಸೂಚಿ ಹೊರಡಿಸಿದೆ.
ಹೀಗಾಗಿ ಇನ್ನು ಮುಂದೆ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್, ಝೀ 5, ನೆಟ್ ಫ್ಲಿಕ್ಸ್, ಡಿಸ್ನಿ ಪ್ಲಸ್ ಸೇರಿದಂತೆ ಎಲ್ಲ ಓ ಟಿ ಟಿ ವೇದಿಕೆಗಳು ತಮ್ಮ ಕಂಟೆಂಟ್ ಗಳ ಪ್ರಸಾರದ ಸಂದರ್ಭದಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ.
ಆನ್ಲೈನ್ ಕಂಟೆಂಟ್ ಆರಂಭದಲ್ಲಿ ಹಾಗೂ ಕೊನೆಯಲ್ಲಿ ತಲಾ 30 ಸೆಕೆಂಡ್ ವರೆಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಪ್ರದರ್ಶಿಸಬೇಕಿದ್ದು, ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಜರಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.