ಪರಪುರುಷನೊಂದಿಗಿನ ಸಂಬಂಧವನ್ನು ಆಕಸ್ಮಿಕವಾಗಿ ರೆಕಾರ್ಡ್‌ ಮಾಡಿಕೊಂಡ ಮಹಿಳೆ; ವಿಡಿಯೋ ಬಹಿರಂಗವಾಗುತ್ತಲೇ ಹೇಳಿದ್ದೇನು ಗೊತ್ತಾ ?

’ಮ್ಯಾರೀಡ್ ಅಟ್ ಫರ್ಸ್ಟ್ ಸೈಟ್’ನ ಎಂಟನೇ ಸೀಸನ್‌ನಲ್ಲಿ ಕಾಣಿಸಿಕೊಂಡ ರೆಬೆಕ್ಕಾ ಜ಼ೆಮೆಕ್ ಅವರು ಜೇಕ್ ಎಡ್ವರ್ಡ್ಸ್ ಜೊತೆಗೆ ಭಾರೀ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು.

ಖುದ್ದು ರೆಬೆಕ್ಕಾ ಶೂಟ್ ಮಾಡಿದ ವಿಡಿಯೋವೊಂದು ಶೋನಲ್ಲಿ ಅಪ್ಡೇಟ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ತಮ್ಮ ನಾಯಿಯ ಆರೋಗ್ಯದ ಕುರಿತು ಮಾಹಿತಿ ನೀಡುತ್ತಿರುವ ರೆಬೆಕ್ಕಾ ಇದೇ ವೇಳೆ ಪಕ್ಕದಲ್ಲಿ ಬ್ಲರ್‌ ಆಗಿ ಕಾಣುವ ಪುರುಷನೊಂದಿಗೆ ಮುತ್ತಿಡುತ್ತಿರುವುದು ಕಂಡು ಬಂದಿದೆ.

ಶೋನ ಇಡೀ ತಾರಾಗಣದ ಮುಂದೆ ಈ ವಿಡಿಯೋ ಪ್ಲೇ ಮಾಡಿದ ಕಾರಣ, ಅಲ್ಲಿಯೇ ಇದ್ದ ಜೇಕ್, “ಏನದು?” ಎಂದು ರೆಬೆಕ್ಕಾಗೆ ಕೇಳಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ರೆಬೆಕ್ಕಾ, “ಅದು ನನ್ನ ಸಹೋದರ,” ಎಂದಿದ್ದಾರೆ.

ರೆಬೆಕ್ಕಾರ ಈ ಉತ್ತರ ಯಾರೋ ಅಲ್ಲಿದ್ದವರಿಗೆ ಸರಿ ಅನಿಸಲಿಲ್ಲ. “ನಾನು ನನ್ನ ಸಹೋದರಿಗೆ ಹಾಗೆ ಮುತ್ತು ಕೊಡೋದಿಲ್ಲ,” ಎಂದು ಅಲ್ಲಿದ್ದ ಒಬ್ಬರು ಹೇಳಿದರೆ, ಇದಕ್ಕೆ ಪ್ರತಿಕ್ರಿಯಿಸಿದ ರೆಬೆಕ್ಕಾ, “ಹೌದು, ಅದು ಮನೆಯಲ್ಲಿ. ನಿಮ್ಮ ಸ್ನೇಹಿತರಿಗೆ ಮುತ್ತು ಕೊಡುವ ಹಾಗೆ,” ಎಂದಿದ್ದಾರೆ.

ಇದೇ ವೇಳೆ, ವಿಡಿಯೋವನ್ನು ಮತ್ತೊಮ್ಮೆ ಪ್ಲೇ ಮಾಡಲು ಹೇಳಿದ ಜೇಕ್, “ಆಕೆಯ ಸಹೋದರ ಹೇಗೆ ಕಾಣುತ್ತಾನೆ ಎಂದು ನನಗೆ ಗೊತ್ತಿದೆ,” ಎಂದಿದ್ದಾರೆ. ಆಕೆ ನಿಜವಾಗಿಯೂ ಪ್ರಾಮಾಣಿಕ ಉತ್ತರ ನೀಡುತ್ತಿದ್ದಾಳೆಯೇ ಎಂದು ಖುದ್ದು ರೆಬೆಕ್ಕಾಳನ್ನು ಜೇಕ್ ಕೇಳಿದ್ದಾರೆ. ಇದಕ್ಕೆ ಕೂಡಲೇ ’ಯೆಸ್’ ಎಂದಿದ್ದಾರೆ ರೆಬೆಕ್ಕಾ.

ಸ್ವಲ್ಪ ಹೊತ್ತಿನ ಬಳಿಕ ನಿಜ ಏನೆಂದು ತಿಳಿಸಿದ ರೆಬೆಕ್ಕಾ, ತಾನು ಜೇಕ್‌ಗೆ ವಂಚಿಸಿದ್ದಾಗಿ ಹೇಳಿಕೊಂಡಿದ್ದಾರೆ. “ನನ್ನ ಮನಸ್ಸಿನಲ್ಲಿ, ಆ ವೇಳೆಯಲ್ಲಿ, ನಾನು ಜೇಕ್‌ಗೆ ಮೋಸ ಮಾಡುತ್ತಿದ್ದೇನೆ ಎಂದು ಸಹ ಅಂದುಕೊಂಡಿರಲಿಲ್ಲ. ಯಾರಾದರೂ ಆ ರೀತಿ ನೋಡಿದರೆ, ನಾನು ಅದನ್ನು ತೆಗೆದುಕೊಳ್ಳಲು ಸಿದ್ಧ, ಆದರೆ ನಾನು ನನ್ನ ಸಂತಸ ಹಾಗೂ ಸತ್ಯವನ್ನು ಮುಟ್ಟಿದ್ದೇನೆ ಎಂದು ನನಗೆ ಗೊತ್ತಿದೆ,” ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read