ನಮ್ಮ ದೃಷ್ಟಿಬಲಕ್ಕೆ ಕಠಿಣ ಸವಾಲೆಸೆಯಬಲ್ಲ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೃಷ್ಟಿ ಭ್ರಮಣೆಯ ಅನೇಕ ಚಿತ್ರಗಳು ಜನರ ಚಿತ್ತ ಸೆಳೆಯುತ್ತವೆ.
ಇತ್ತೀಚೆಗೆ ಶೇರ್ ಮಾಡಲಾದ ಚಿತ್ರವೊಂದರಲ್ಲಿ ನೆಲಕ್ಕೆ ಹಾಕಲಾದ ಗ್ರಾನೈಟ್ ಬಣ್ಣದಲ್ಲೇ ಇರುವ ಬೆಕ್ಕನ್ನು ಪತ್ತೆ ಮಾಡುವ ಸವಾಲನ್ನು ವೀಕ್ಷಕರಿಗೆ ಎಸೆಯಲಾಗಿದೆ.
ಬಿಳಿ ಬಣ್ಣದ ನೆಲದ ಮೇಲೆ ಬಿಳಿ ಬಣ್ಣದ ಬೆಕ್ಕನ್ನು ಚಿತ್ರದಲ್ಲಿ ನೋಡಬಹುದಾಗಿದೆ.