ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ಅಭಿನಯದ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ನೀನ್ಯಾರೆಲೆ ಎಂಬ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಮಾನ್ ಮಲ್ಲಿಕ್ ಧ್ವನಿಯಾಗಿರುವ ಈ ಹಾಡಿಗೆ ಸಿದ್ದು ಕೋಡಿಪುರ ಸಾಹಿತ್ಯವಿದೆ. ವೀರ್ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಗೆ ಜೋಡಿಯಾಗಿ ಮಲ್ಲಿಕಾ ಸಿಂಗ್ ಅಭಿನಯಿಸಿದ್ದು, ರಾಮ್ ಮೂವೀಸ್ ಬ್ಯಾನರ್ ನಲ್ಲಿ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದಾರೆ. ಆದಿ ಸಂಕಲನವಿದ್ದು, ಕಾರ್ತಿಕ್ ಶರ್ಮಾ ಮತ್ತು ಸಭಾ ಕುಮಾರ್ ಛಾಯಾಗ್ರಹಣವಿದೆ.