ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದು, ಪಂಜಾಬ್ ನ ಜಲಂಧರ್ ನಲ್ಲಿ ನಡೆದಿರುವ ಭಯಾನಕ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಸುಮಾರು ಐದು ನಾಯಿಗಳು ಬೈಕ್ ಸುತ್ತುವರೆದು ಸವಾರ ಮತ್ತು ಹಿಂದೆ ಕುಳಿತಿದ್ದವನ ಮೇಲೆ ಜಿಗಿಯಲು ಪ್ರಯತ್ನಿಸಿದವು.
ನಾಯಿ ಓಡಾಟ ನೋಡಿದ ಬೈಕ್ ಸವಾರ ವಾಹನದ ವೇಗವನ್ನು ಕಡಿಮೆ ಮಾಡ್ತಿದ್ದಂತೆ ನಾಯಿಗಳು ದಾಳಿ ಮಾಡಲು ಮುತ್ತಿಕೊಳ್ತವೆ. ಈ ವೇಳೆ ಹಿಂಬದಿ ಸವಾರನ ಜಾಕೆಟ್ ಎಳೆದು ಕಟ್ಟಲು ಮುಂದಾಗ್ತವೆ. ವಾಹನ ಸವಾರ ಧೈರ್ಯದಿಂದ ಕೆಳಗಿಳಿದು ಕಲ್ಲಿನಿಂದ ಅವುಗಳನ್ನು ಬೆದರಿಸಲು ಮುಂದಾದಾಗ ನಾಯಿಗಳು ಕಾಲ್ಕಿಳುತ್ತವೆ.
ಜಲಂಧರ್‌ನಲ್ಲಿ ಪ್ರತಿ ತಿಂಗಳು 300 ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ ಎಂದು ಟ್ರಿಬ್ಯೂನ್ ಇಂಡಿಯಾ ವರದಿಯಲ್ಲಿ ತಿಳಿಸಿದ್ದು, ಕಳೆದ ಆರರಿಂದ ಏಳು ತಿಂಗಳುಗಳಲ್ಲಿ ದೈನಂದಿನ ನಾಯಿ ಕಡಿತ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ.
https://twitter.com/sirajnoorani/status/1643556933700583424?ref_src=twsrc%5Etfw%7Ctwcamp%5Etweetembed%7Ctwterm%5E1643556933700583424%7Ctwgr%5E1a584aca3132f565c0b6b9084a26fa2e92835887%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-2-men-attacked-by-nearly-5-stray-dogs-in-punjabs-jalandhar