ಸಿನಿಮಾ ಪ್ರಚಾರದ ವೇಳೆ ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ನಟ…! ಮೂರು ನಿಮಿಷದಲ್ಲಿ 184 ‘ಸೆಲ್ಫಿ’ ಕ್ಲಿಕ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಸೆಲ್ಫಿ’ ಪ್ರಚಾರ ಕಾರ್ಯದ ಸಂದರ್ಭದಲ್ಲಿಯೇ ಗಿನ್ನಿಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ನಿಮಿಷದ ಅವಧಿಯಲ್ಲಿ 184 ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಮೂಲಕ ಅಕ್ಷಯ್ ಕುಮಾರ್ ಹೊಸ ಗಿನ್ನಿಸ್ ದಾಖಲೆ ಬರೆದಿದ್ದು, ಈ ಮೊದಲು ಅಮೆರಿಕದ ಜೇಮ್ಸ್ ಸ್ಮಿತ್ ಎಂಬವರು ಮೂರು ನಿಮಿಷದಲ್ಲಿ 168 ಸೆಲ್ಫಿ ಹಾಗೂ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಇದಕ್ಕೂ ಮೊದಲು ಮೂರು ನಿಮಿಷದ ಅವಧಿಯಲ್ಲಿ 105 ಸೆಲ್ಫಿ ತೆಗೆದುಕೊಂಡಿದ್ದರು.

ಈ ದಾಖಲೆಯನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದಿರುವ ಅಕ್ಷಯ್ ಕುಮಾರ್, ಇದೇ ಸಂದರ್ಭದಲ್ಲಿ ಮಾಧ್ಯಮ ಒಂದರ ಜೊತೆ ಮಾತನಾಡುವ ವೇಳೆ ಭಾರತವೇ ನನಗೆ ಸರ್ವಸ್ವವಾಗಿದ್ದು, ಕೆನಡಾ ಪೌರತ್ವ ತೊರೆಯುತ್ತಿದ್ದೇನೆ ಎಂದಿದ್ದಾರೆ. ಈಗಾಗಲೇ ಈ ಕುರಿತು ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read