ಇದ್ದಕ್ಕಿದ್ದಂತೆ ಬಾಯಿ ತೆರೆದ ಎಸ್ಕಲೇಟರ್ ವ್ಯಕ್ತಿಯೊಬ್ಬನನ್ನ ತನ್ನೊಳಕ್ಕೆ ಎಳೆದುಕೊಂಡು ಆತಂಕ ಸೃಷ್ಟಿಸಿದ ಹಳೆ ವಿಡಿಯೋ ಮತ್ತೆ ವೈರಲ್ ಆಗಿದೆ.
ಅಂಡರ್ ಗ್ರೌಂಡ್ ನಿಲ್ದಾಣವೊಂದರ ಕೆಳಗೆ ದೊಡ್ಡ ರಂಧ್ರ ಕಾಣಿಸಿಕೊಂಡಿದ್ದರಿಂದ ಎಸ್ಕಲೇಟರ್‌ನೊಳಕ್ಕೆ ವ್ಯಕ್ತಿಯೊಬ್ಬರು ಅಚಾನಕ್ಕಾಗಿ ಬೀಳುತ್ತಾರೆ. ಈ ಭಯಾನಕ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ ಮತ್ತು ಹಲವರನ್ನು ಬೆಚ್ಚಿಬೀಳಿಸಿದೆ.
ಬಿಬಿಸಿ ಪ್ರಕಾರ, ಫೆಬ್ರವರಿ 2018 ರಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಅಯಾಜಗಾ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ ಪ್ರಯಾಣಿಕರು ಎಸ್ಕಲೇಟರ್ ನಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಎಸ್ಕಲೇಟರ್ ಕೆಳಗೆ ಉಂಟಾದ ದೊಡ್ಡ ಗುಂಡಿಯಿಂದಾಗಿ ಎಸ್ಕಲೇಟರ್ ಹಾಳಾಗಿ ಗುಂಡಿಯೊಳಕ್ಕೆ ವ್ಯಕ್ತಿ ಬೀಳುತ್ತಾರೆ. ಅವರ ರಕ್ಷಣೆಗೆ ಇತರರು ಮುಂದಾದ್ರೂ ಅದು ಸಾಧ್ಯವಾಗುವುದಿಲ್ಲ.
ಅಂತಿಮವಾಗಿ ಅಗ್ನಿಶಾಮಕ ದಳದಿಂದ ರಕ್ಷಿಸಲ್ಪಟ್ಟ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
https://twitter.com/0ddIyterrifying/status/1612168697413767174?ref_src=twsrc%5Etfw%7Ctwcamp%5Etweetembed%7Ctwterm%5E1612168697413767174%7Ctwgr%5E6e67f790cc43a22381f94cc0165f1b4458a95d84%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fold-video-of-man-being-swallowed-by-escalator-goes-viral-3715372