
ಆದರೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನ ಓಲಾ ನೀಡಲಿದೆ. ಓಲಾದ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್ಗಳು ಬೆಂಗಳೂರಿನಲ್ಲಿ ಟ್ಯಾಕ್ಸಿ ರೂಪದಲ್ಲಿ ನಿಮಗೆ ಲಭ್ಯವಿರಲಿದೆ.
ಓಲಾದ ಸಹ ಸಂಸ್ಥಾಪಕ ಭವಿಷ್ ಅಗರ್ವಾಲ್ ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ಶೇರ್ ಮಾಡಿದ್ದಾರೆ. ಇಂದಿನಿಂದ ಬೆಂಗಳೂರಿನಲ್ಲಿ ಓಲಾ ಬೈಕ್ಟ್ಯಾಕ್ಸಿ ಸೇವೆ ಪುನಾರಂಭಗೊಳ್ಳುತ್ತಿದೆ. ಆದರೆ ಈ ಬಾರಿ ನಮ್ಮ ಸ್ವಂತ ಎಲೆಕ್ಟ್ರಿಕ್ ಬೈಕ್ಗಳಾದ ಎಸ್ 1 ಈ ಸೇವೆಯನ್ನ ನೀಡಲಿದೆ ಎಂದು ಹೇಳಿದ್ದಾರೆ.
ಐದು ಕಿಲೋಮೀಟರ್ ದೂರಕ್ಕೆ 25 ರೂಪಾಯಿ ಹಾಗೂ 10 ಕಿಲೋಮೀಟರ್ ದೂರಕ್ಕೆ 50 ರೂಪಾಯಿ ದರ ನಿಗದಿ ಮಾಡಲಾಗಿದೆ. ಅತ್ಯಂತ ಕಡಿಮೆ ಹಣದಲ್ಲಿ, ಅತ್ಯಂತ ಆರಾಮದಾಯಕವಾಗಿ, ಪರಿಸರಕ್ಕೂ ಯಾವುದೇ ರೀತಿಯ ಹಾನಿಯುಂಟು ಮಾಡದೇ ಪ್ರಯಾಣಿಸಬಹುದು ಅಂತಾ ಭವಿಷ್ ಅಗರ್ವಾಲ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಾಡಿಗೆ ಕ್ಯಾಬ್ ಹಾಗೂ ಆಟೋ ಮಾಲೀಕರು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡ್ಬೇಕು ಅಂತಾ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಬೈಕ್ ಟ್ಯಾಕ್ಸಿಗಳು ಮಹಿಳೆಯರಿಗೆ ಅಸುರಕ್ಷಿತ ಹಾಗೂ ವೈಟ್ ಬೋರ್ಡ್ ಬೈಕ್ಗಳನ್ನು ಟ್ಯಾಕ್ಸಿ ರೂಪದಲ್ಲಿ ಬಳಕೆ ಮಾಡಬಹುದು ಕಾನೂನು ಬಾಹಿರ ಎಂಬುದು ಇವರ ಆರೋಪವಾಗಿದೆ. ಅಲ್ಲದೇ ಬೆಂಗಳೂರಿನ ಅನೇಕ ಕಡೆಗಳಲ್ಲಿ ರ್ಯಾಪಿಡೋ ಬೈಕ್ಗಳಿಗೆ ಕೆಲ ಆಟೋ ಚಾಲಕರು ಹಾನಿಯುಂಟು ಮಾಡಿರುವ ಘಟನೆಗಳೂ ವರದಿಯಾಗಿದ್ದವು.