ದೇಶದ ಅತಿ ದೊಡ್ಡ ಇವಿ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಓಲಾ ರೆಡಿ

ಭಾರತದ ಅತಿ ದೊಡ್ಡ ಇವಿ ಸೆಲ್ ಉತ್ಪಾದನಾ ಘಟಕವೆಂದು ಹೇಳಲಾದ ವ್ಯವಸ್ಥೆಯನ್ನು ಓಲಾ ಎಲೆಕ್ಟ್ರಿಕ್ ಭರದಿಂದ ಸ್ಥಾಪಿಸುತ್ತಿದೆ. ಓಲಾದ ಈ ನಡೆಯಿಂದ ಭಾರತದ ಇವಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗುವ ನಿರೀಕ್ಷೆ ಇದೆ.

ತನ್ನ ಸೆಲ್ ಗಿಗಾಫ್ಯಾಕ್ಟರಿಯ ನಿರ್ಮಾಣವನ್ನು ಓಲಾ ಇತ್ತೀಚೆಗಷ್ಟೇ ಘೋಷಿಸಿತ್ತು. ಈ ಮೂಲಕ ಸುಸ್ಥಿರ ಸಾರಿಗೆ ಪರಿಹಾರಗಳ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಡಲು ಓಲಾ ಸನ್ನದ್ಧವಾಗಿದೆ.

ವರ್ಷಾಂತ್ಯಕ್ಕೆ ಸಕ್ರಿಯವಾಗುವ ನಿರೀಕ್ಷೆ ಇರುವ ಸೆಲ್ ಕಾರ್ಖಾನೆಯ ಆರಂಭಿಕ ಸಾಮರ್ಥ್ಯ 5 ಗಿಗಾವ್ಯಾಟ್‌ ಗಂಟೆ/ವರ್ಷ ಇರಲಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಶಕ್ತಿ ನೀಡಲು ಬೇಕಾದ ಬ್ಯಾಟರಿಗಳ ಉತ್ಪಾದನೆಯನ್ನು ಈ ಘಟಕದಲ್ಲಿ ಮಾಡಲಾಗುವುದು.

ಸುಸ್ಥಿರ ಸಾರಿಗೆ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ ಓಲಾದ ಈ ಹೆಜ್ಜೆ ಒಂದು ದೊಡ್ಡ ಅಧ್ಯಾಯವೇ ಆಗಿದೆ. ಈ ಘಟಕದ ಸ್ಥಾಪನೆಯಿಂದ 10,000 ನೇರ ಉದ್ಯೋಗಗಳು ಹಾಗೂ ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗಲಿವೆ.

ತಮಿಳುನಾಡಿನಲ್ಲಿ ತಲೆಯೆತ್ತಲಿರುವ ಈ ಘಟಕದಲ್ಲಿ ಕೇವಲ ಓಲಾ ದ್ವಿಚಕ್ರ ವಾಹನಗಳಿಗೆ ಮಾತ್ರವಲ್ಲ, ಇತರೆ ಕಂಪನಿಗಳ ಇವಿ ವಾಹನಗಳಿಗೂ ಬ್ಯಾಟರಿ ಉತ್ಪಾದಿಸಲಾಗುವುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read