ರಾತ್ರಿ ಕೂಲಿ ಕಾರ್ಮಿಕ – ಬೆಳಿಗ್ಗೆ ಬಡ ಮಕ್ಕಳಿಗೆ ಶಿಕ್ಷಕ; ವ್ಯಕ್ತಿಯ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಒಡಿಶಾದ ವ್ಯಕ್ತಿಯೊಬ್ಬರು ರಾತ್ರಿ ಹೊತ್ತು ರೈಲು ನಿಲ್ದಾಣದಲ್ಲಿ ಪೋರ್ಟರ್​ ಆಗಿ ಕೆಲಸ ಮಾಡಿ, ಹಗಲು ಹೊತ್ತು ಬಡಮಕ್ಕಳಿಗೆ ಪಾಠ ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ.

ಒಡಿಶಾದ ಬೆಹ್ರಾಂಪುರದ ಈ ವ್ಯಕ್ತಿ 31 ವರ್ಷದ ನಾಗೇಶ ಪಾತ್ರೋ. ಖಾಸಗಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಇವರು 12 ವರ್ಷಗಳಿಂದ ಹಮಾಲಿಯಾಗಿ ಕೆಲಸ ಮಾಡುತ್ತಿದ್ದಾರೆ.

ರಾತ್ರಿ ಹಮಾಲಿ ಕೆಲಸ. ಹಗಲಿನಲ್ಲಿ ಶಿಕ್ಷಕ ವೃತ್ತಿ. ಜೊತೆಗೆ 2006ರಲ್ಲಿ ನಿಂತು ಹೋದ ತನ್ನ ವಿದ್ಯಾಭ್ಯಾಸವನ್ನೂ ಮುಂದುವರಿಸುತ್ತಿದ್ದಾರೆ. ಪೋರ್ಟರ್​ ಆಗಿ ಕೆಲಸ ಮಾಡುವ ಹೊತ್ತಿಗೆ ನಾನು ಎಂಎ ಮುಗಿಸಿದ್ದೆ ಎನ್ನುತ್ತಾರೆ ನಾಗೇಶ್​.

ಈ ಪೋಸ್ಟ್​ ಅನ್ನು ಈ ತನಕ 85 ಸಾವಿರಕ್ಕೂ ಅಧಿಕಮಂದಿ ನೋಡಿದ್ದಾರೆ. ಬಡಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಮತ್ತು ಮೈಮುರಿದು ದುಡಿಯುವ ಇಂಥ ಪ್ರಾಮಾಣಿಕರು ನಮ್ಮ ದೇಶಕ್ಕೆ ಬೇಕು ಎಂದು ನೆಟ್ಟಿಗರು ಇವರನ್ನು ಅಭಿನಂದಿಸಿದ್ಧಾರೆ. ಮಕ್ಕಳಿಗೆ ಬೇಕಾದ ಪಠ್ಯಪುಸ್ತಕ ಮತ್ತು ಇನ್ನಿತರೇ ವಸ್ತುಗಳನ್ನು ಈ ವ್ಯಕ್ತಿಗೆ ಕೊಡಿ. ಆಗ ಪರಿಣಾಮಕಾರಿಯಾಗಿ ಈ ವ್ಯಕ್ತಿ ಪಾಠ ಮಾಡಲು ಅನುಕೂಲವಾಗುತ್ತದೆ ಎಂದಿದ್ದಾರೆ ಒಬ್ಬರು.

https://twitter.com/ANI/status/1612120871585615873?ref_src=twsrc%5Etfw%7Ctwcamp%5Etweetembed%7Ctwterm%5E1612120871585615873%7Ctwgr%5Ea03d5b72d8a4c17fdb6d4484c33d4a767e59ac7d%7Ctwcon%5Es1_&ref_url=https%3A%2F%2Fwww.news18.com%2Fbuzz%2Fodisha-man-who-works-as-coolie-by-day-turns-teacher-for-underprivileged-kids-at-night-6805795.html

https://twitter.com/ANI/status/1612120871585615873?ref_src=twsrc%5Etfw%7Ctwcamp%5Etweetembed%7Ctwterm%5E1612125652668538880%7Ctwgr%5Ea03d5b72d8a4c17fdb6d4484c33d4a767e59ac7d%7Ctwcon%5Es2_&ref_url=https%3A%2F%2Fwww.news18.com%2Fbuzz%2Fodisha-man-who-works-as-coolie-by-day-turns-teacher-for-underprivileged-kids-at-night-6805795.html

https://twitter.com/ANI/status/1612120871585615873?ref_src=twsrc%5Etfw%7Ctwcamp%5Etweetembed%7Ctwterm%5E1612491130146557952%7Ctwgr%5Ea03d5b72d8a4c17fdb6d4484c33d4a767e59ac7d%7Ctwcon%5Es2_&ref_url=https%3A%2F%2Fwww.news18.com%2Fbuzz%2Fodisha-man-who-works-as-coolie-by-day-turns-teacher-for-underprivileged-kids-at-night-6805795.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read