ಇತ್ತೀಚಿನ ದಿನಗಳಲ್ಲಿ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಸರ್ಕಾರಿ ಯೋಜನೆಯ ಲಾಭ ಪಡೆಯಲು ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಅಗತ್ಯವಾಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು. ಮುಂದೆ ಓದಿ
ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿ ಅದು ಬೇರೆಯವರಿಗೆ ಸಿಕ್ಕಿದ್ರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ತಕ್ಷಣವೇ ನಿಮ್ಮ ಆಧಾರ್ ಕಾರ್ಡ್ ಲಾಕ್ ಮಾಡಿ ನಂತರ ಮತ್ತೆ ಅನ್ಲಾಕ್ ಮಾಡಿಸಬಹುದು. ಇದನ್ನು ಅನ್ಲಾಕ್ ಮಾಡಲು ಆಧಾರ್ ಕೇಂದ್ರಕ್ಕೆ ಹೋಗಬಹುದು.
ನೀವು ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ, ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಅದನ್ನು ಮರಳಿ ಪಡೆಯಬಹುದು.
ಆಧಾರ್ ಕಳೆದು ಹೋಗಿದ್ದರೆ ನೀವು 1947 ಸಂಖ್ಯೆಗೆ ಕರೆ ಮಾಡುವ ಮೂಲಕ ಹೊಸ ಆಧಾರ್ ಕಾರ್ಡ್ ಪಡೆಯಬಹುದು. 1947 ಗೆ ಕರೆ ಮಾಡುವ ಮೂಲಕ, ನೀವು ಇಐಡಿ ಸಂಖ್ಯೆಯನ್ನು ಪಡೆಯುತ್ತೀರಿ. ಅದರ ಇಐಡಿ ಸಹಾಯದಿಂದ, ನಿಮ್ಮ ನಿವಾಸಿ ಪೋರ್ಟಲ್ನಿಂದ ನೀವು ಇ-ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು.