sಬೆಂಗಳೂರು : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಅಂಕಪಟ್ಟಿ ತಿದ್ದುಪಡಿಗಾಗಿ ಅಲೆದಾಡಬೇಕಿಲ್ಲ. ಬಹಳ ಸುಲಭವಾಗಿ ಆನ್ ಲೈನ್ ನಲ್ಲಿ ಅಂಕಪಟ್ಟಿ ತಿದ್ದುಪಡಿ ಮಾಡಬಹುದು.
SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆದ ನಂತರ ಏನೆಲ್ಲ ತೊಂದರೆಗಳಿವೆ ಸರಿಯಾಗಿ ನೋಡಬೇಕು. ತಂದೆ ಅಥವಾ ತಾಯಿಯ ಹೆಸರು, ಜನ್ಮ ದಿನಾಂಕ, ಊರು ಅಥವಾ ಹೆಸರು ತಪ್ಪಿದ್ದರೆ ಯಾವುದೇ ಭೌತಿಕ ಪ್ರಸ್ತಾವನೆ ಸ್ವೀಕಾರ ಪ್ರಕ್ರಿಯೆ ಇಲ್ಲ. ಶಾಲಾ ಹಂತದಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಂಕಪಟ್ಟಿ ತಿದ್ದುಪಡಿಗಾಗಿ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಮಂಡಳಿಯ ವೆಬ್ಸೈಟ್ನ ಶಾಲಾ ಲಾಗಿನ್ ಮೂಲಕ ಪ್ರಾಂಶುಪಾಲರು ಪರಿಷ್ಕರಣೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ.
ಹೌದು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವಿದ್ಯಾರ್ಥಿ ಸ್ನೇಹಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಇದರಿಂದ ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿ ತಿದ್ದುಪಡಿಗಾಗಿ ಬೆಂಗಳೂರಿನ ಕೇಂದ್ರ ಕಚೇರಿ ಅಥವಾ ಮಂಡಳಿಯ ವಿಭಾಗೀಯ ಕಚೇರಿಗೆ ಭೇಟಿ ನೀಡಬೇಕಾದ ಅವಶ್ಯಕತೆಯಿಲ್ಲ. ತಾವು ಓದಿದ ಪ್ರೌಢಶಾಲೆಯಲ್ಲೇ ಸೌಲಭ್ಯ ಪಡೆಯಬಹುದಾಗಿದೆ.
ತಿದ್ದುಪಡಿ ಮಾಡಿಕೊಳ್ಳಲು ಅನುಸರಿಸಬೇಕಾದ ವಿಧಾನ
1) ಮೊದಲಿಗೆ SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆದ ನಂತರ ಏನೆಲ್ಲ ತೊಂದರೆಗಳಿವೆ ಸರಿಯಾಗಿ ನೋಡಬೇಕು. ತಂದೆ ಅಥವಾ ತಾಯಿಯ ಹೆಸರು, ಜನ್ಮ ದಿನಾಂಕ, ಊರು ಅಥವಾ ಹೆಸರು ತಪ್ಪಿದ್ದರೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಬೇಕು.
2) ಮುಖ್ಯೋಪಾಧ್ಯಯರು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಗೆ ಆನ್ಲೈನ್ ಮೂಲಕ ಮಾಹಿತಿಯನ್ನು ರವಾನಿಸುತ್ತಾರೆ.
3) ನಂತರ ಅಂಕಪಟ್ಟಿ ತಿದ್ದುಪಡಿಗೆ ನಿಗದಿಪಡಿಸಿರುವ ಶುಲ್ಕವನ್ನು ಬ್ಯಾಂಕಿನ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಆನ್ಲೈನ್ ನಲ್ಲಿ ಪಾವತಿಸಬೇಕು.ಅಲ್ಲದೇ ಆಫ್ ಲೈನ್ ಕೂಡ ಪಾವತಿಸಲು ಅವಕಾಶ ನೀಡಲಾಗಿದ್ದು, ನಿಗದಿ ಪಡಿಸಿರುವ ಚಲನ್ ಡೌನ್ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದು.
4) ನಂತರ ಶಾಲಾ ಮುಖ್ಯೋಪಾಧ್ಯಾಯರು ಕಳುಹಿಸಿದ ನಿಮ್ಮ ದಾಖಲೆಗಳನ್ನು ಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿ ನಂತರ ಮುಖ್ಯ ತಿದ್ದುಪಡಿಗಾಗಿ ವಿದ್ಯಾರ್ಥಿಗೆ ಈಗಾಗಲೇ ನೀಡಿದ್ದ ಮೂಲ ಅಂಕಪಟ್ಟಿಯನ್ನು ವಿಭಾಗದ ಕಚೇರಿಗೆ ಕಳುಹಿಸುವಂತೆ ಎಸ್ಎಮ್ಎಸ್ ಮೂಲಕ ಮಾಹಿತಿಯನ್ನು ಕಳುಹಿಸುತ್ತಾರೆ. ನಂತರ ವಿದ್ಯಾರ್ಥಿಗಳು ಕಡ್ಡಾಯವಾಗಿ ಈಗಾಗಲೇ ವಿತರಿಸಲಾಗಿದ್ದ ಮೂಲ ಅಂಕಪಟ್ಟಿಯನ್ನು ಹಿಂತಿರುಗಿಸಬೇಕು.
5) ಕರ್ನಾಟಕ ಶಾಲಾ ಪರೀಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿ ಸ್ನೇಹಿ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಿದ್ದುಪಡಿ ಪ್ರಸ್ತಾಪ ಸಲ್ಲಿಸಲು ಅನುಕೂಲವಾಗುವಂತೆ ಲಾಗಿನ್ ಸೌಲಭ್ಯ ಕಲ್ಪಿಸಿದೆ. ವಿದ್ಯಾರ್ಥಿಗಳು ಕೋರಿಕೆ ಸಲ್ಲಿಸಿದ ಒಂದು ವಾರದಲ್ಲೇ ಪರಿಷ್ಕೃತ ಅಂಕಪಟ್ಟಿ ಸಿಗಲಿದೆ
ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, ತಾಯಿ-ತಂದೆ ಹೆಸರು ಜನ್ಮದಿನಾಂಕ ಸೇರಿದಂತೆ ಯಾವುದಾದರೂ ತಪ್ಪುಗಳಿದ್ದರೆ ತಾವು ಓದಿದ ಶಾಲೆಗೆ ತೆರಳಿ ಅಗತ್ಯವಾದ ಪೂರಕ ದಾಕಲೆಗಳನ್ನು ಸಲ್ಲಿಸಿದರೆ ಶಾಲೆಗಳಲ್ಲೇ ತಿದ್ದುಪಡಿ ಮಾಡಿದ ಅಂಕಪಟ್ಟಿ ಸಿಗಲಿದೆ.