ರಾಜ್ಯ ಸರ್ಕಾರದ 4 ನೇ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ 2000 ರೂ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ನಿನ್ನೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ನಿನ್ನೆಯಿಂದಲೇ ಮಹಿಳೆಯರ ಖಾತೆಗೆ 2000 ರೂ. ಹಣ ಜಮಾ ಆಗುತ್ತಿದೆ.
ಕೆಲವು ಮಹಿಳೆಯರ ಖಾತೆಗೆ 2000 ರೂ ಹಣ ಬಂದಿರುವ ಮೆಸೇಜ್ ಬಂದಿದೆ ಇದರಿಂದ ಮಹಿಳೆಯರು ಖುಷಿಯಾಗಿದ್ದಾರೆ. ಕೋಟ್ಯಾಂತರ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವ ಕಾರಣ ನಿಮ್ಮ ಖಾತೆಗೆ ಹಣ ಬರುವುದಕ್ಕೆ ಒಂದೆರಡು ದಿನಗಳ ಸಮಯ ತೆಗೆದುಕೊಳ್ಳಬಹುದು. ಸೆಪ್ಟೆಂಬರ್ 5 ರೊಳಗೆ ಎಲ್ಲಾ ಮಹಿಳೆಯರ ಖಾತೆಗೆ 2000 ರೂ ಹಣ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಗೃಹಲಕ್ಷ್ಮೀ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ..ಇಲ್ಲವಾ ಎಂಬುದನ್ನು ಈ ರೀತಿಯಾಗಿ ಚೆಕ್ ಮಾಡಬಹುದು.
ಮೊದಲು ನಿಮ್ಮ ಮೊಬೈಲ್ ಮೂಲಕವೇ ಗೃಹಲಕ್ಷ್ಮೀ ಯೋಜನೆಯ ಸಹಾಯಧನ ಯಾವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಎನ್ನುವುದನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು
ಈ ವಿಧಾನದ ಮೂಲಕ ಚೆಕ್ ಮಾಡಿ
1) ಪ್ಲೇ ಸ್ಟೋರ್ ಗೆ ಹೋಗಿ DBT ಕರ್ನಾಟಕ ಎನ್ನುವ ಕರ್ನಾಟಕ ಸರ್ಕಾರದ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ನೇರವಾಗಿhttps://play.google.com/store/apps/detailsid=com.dbt karnataka ಲಿಂಕ್ ಕ್ಲಿಕ್ ಮಾಡುವ ಮೂಲಕವೂ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.
2) ಆಪ್ ಡೌನ್ಲೋಡ್ ಆದ ಬಳಿಕ ಮೊದಲಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ OTP ಯನ್ನು ಪಡೆಯಬೇಕು. ನಂತರ OTP ಯನ್ನು ಹಾಕಿ ವೆರಿಫೈ ಮಾಡಬೇಕು. ನಂತರ ನಾಲ್ಕು ಅಂಕೆಯ Password ಸೆಟ್ ಮಾಡಬೇಕು.
3) ಈ ಹಂತ ಯಶಸ್ವಿಯಾದ ಬಳಿಕ ನೀವು ಯಶಸ್ವಿಯಾಗಿ DBT ಕರ್ನಾಟಕ ಆಪ್ ಅನ್ನು ಓಪನ್ ಮಾಡಿರುತ್ತೀರಿ, ನಿಮ್ಮ ಆಧಾರ್ ಕಾರ್ಡ್ ನ ವಿವರ ಬರುತ್ತದೆ.
4) ನಂತರ ಅದರಲ್ಲಿ Payment ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿದ್ರೆ ನಿಮಗೆ DBT ಮೂಲಕ ಸರ್ಕಾರದ ಯಾವೆಲ್ಲಾ ಯೋಜನೆಯ ಹಣ ವರ್ಗಾವಣೆ ಆಗಿದೆ ಎನ್ನುವುದರ ಪಟ್ಟಿ ಬರುತ್ತದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಿದ್ದರೆ ಹಣ ಹಾಗೂ ಅದರ ಮಾಹಿತಿ ಕೂಡ ಬರುತ್ತದೆ. ಈ ರೀತಿಯಾಗಿ ನೀವು ಚೆಕ್ ಮಾಡಬಹುದು.