ಗಮನಿಸಿ : ವಾಟ್ಸಾಪ್ ಸ್ಟೇಟಸ್’ನಲ್ಲಿ ಹಾಡು ಹಾಕುವುದು ಹೇಗೆ..? ಇಲ್ಲಿದೆ ಟ್ರಿಕ್ಸ್

ವಾಟ್ಸಾಪ್ ಸ್ಟೇಟಸ್ ಯಾವಾಗಲೂ ಜೀವನದ ಕ್ಷಣಗಳನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುವ ಒಂದು ಮಾರ್ಗವಾಗಿದೆ . ಇದೀಗ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಪ್ರಾರಂಭಿಸಿದೆ. ಇದು ತಮ್ಮ ಸ್ಟೇಟಸ್ಗೆ ಡೈರೆಕ್ಟ್ ಆಗಿ ಸಾಂಗ್ ಸೇರಿಸಲು ಅನುವು ಮಾಡಿಕೊಡುತ್ತದೆ.

ವಾಟ್ಸಾಪ್ನ ಈ ಹೊಸ ಅಪ್ಡೇಟ್ ಅಡಿಯಲ್ಲಿ ಬಳಕೆದಾರರು ಮ್ಯೂಸಿಕ್ ಲೈಬ್ರರಿಯನ್ನು ಪಡೆಯುತ್ತಾರೆ. ಅಲ್ಲಿ ಅವರು ತಮ್ಮ ನೆಚ್ಚಿನ ಹಾಡುಗಳನ್ನು ಆಯ್ಕೆ ಮಾಡಬಹುದು . ಆಂಡ್ರಾಯ್ಡ್ ಆವೃತ್ತಿ 2.25.2.5 ಗಾಗಿ ವಾಟ್ಸಾಪ್ ನ ಹೊಸ ಬೀಟಾ ನವೀಕರಣವು ಆಂಡ್ರಾಯ್ಡ್ ಫೋನ್ ಗಳಿಗೆ ಲಭ್ಯವಿದೆ. ಈ ನವೀಕರಣವು ‘ಮ್ಯೂಸಿಕ್ ಫಾರ್ ಸ್ಟೇಟಸ್ ಅಪ್ಡೇಟ್ಸ್’ ಎಂಬ ಹೊಸ ವೈಶಿಷ್ಟ್ಯವನ್ನು ತರುತ್ತದೆ.

ವಾಟ್ಸಾಪ್ ಮ್ಯೂಸಿಕ್ ಸ್ಟೇಟಸ್ ಬಳಸುವುದು ಹೇಗೆ?

• ವಾಟ್ಸಾಪ್ ಓಪನ್ ಮಾಡಿ, ಸ್ಟೇಟಸ್ ವಿಭಾಗಕ್ಕೆ ಹೋಗಿ.
• ‘Add Music’ ಅಥವಾ ‘Music Sticker’ ಆಪ್ಶನ್ ಆಯ್ದುಕೊಳ್ಳಿ..
• ಲಭ್ಯವಿರುವ ಸಾಂಗ್ಸ್ ಲಿಸ್ಟ್ನಿಂದ ಯಾವುದೇ ಹಾಡನ್ನು ಆಯ್ಕೆಮಾಡಿ ಅಥವಾ ಅದನ್ನು ನಿಮ್ಮ ಪ್ಲೇಪಟ್ಟಿಗೆ ಸೇರಿಸಿ
• ಸ್ಟೇಟಸ್ಗೆ ಇತರೆ ಎಫೆಕ್ಟ್ಸ್ ಮತ್ತು ಪದ, ಅಕ್ಷರ ಸೇರಿಸಿ, ನಂತರ ಹಂಚಿಕೊಳ್ಳಿ . ವಾಟ್ಸ್ಆ್ಯಪ್ನಲ್ಲಿ, ನೀವು 60 ಸೆಕೆಂಡುಗಳ ಹಾಡನ್ನು ಸ್ಟೇಟಸ್ಗೆ ಅಪ್ಲೋಡ್ ಮಾಡಬಹುದು. ಹೊಸ ವೈಶಿಷ್ಟ್ಯದಲ್ಲಿ, 15 ಸೆಕೆಂಡುಗಳ ಹಾಡನ್ನು ಫೋಟೋದಲ್ಲಿ ಸುಲಭವಾಗಿ ಹಾಕಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read