ಗಮನಿಸಿ : 2 ವರ್ಷ ಬಳಸದ ‘G-Mail’ ಖಾತೆ ಡಿಸೆಂಬರ್ ನಲ್ಲಿ ಬಂದ್ , ಒಮ್ಮೆ ಲಾಗಿನ್ ಆಗಿಬಿಡಿ..!

ನಿಮ್ಮ ಬಳಿ ಜಿ ಮೇಲ್ ಖಾತೆ ಉಂಟಾ..? ಇದನ್ನು ಕಳೆದ 2 ವರ್ಷದಿಂದ ಬಳಸುತ್ತಿಲ್ಲವಾ..? ಹಾಗಿದ್ದರೆ ಬೇಗ ಲಾಗಿನ್ ಆಗಿ ಬಿಡಿ…ಇಲ್ಲವಾದಲ್ಲಿ ಮುಂದಿನ ತಿಂಗಳು ಡಿಲೀಟ್ ಆಗಬಹುದು.

ಹೌದು, ಗೂಗಲ್ ಕಂಪನಿಯು ತನ್ನ ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಿನಲ್ಲಿ ಅಪ್ ಡೇಟ್ ಮಾಡಿದೆ.
ಮುಂದಿನ ಡಿಸೆಂಬರ್ ನಲ್ಲಿ ಕಳೆದ 2 ವರ್ಷದಿಂದ ಒಮ್ಮೆಯೂ ಲಾಗಿನ್ ಮಾಡದ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುತ್ತೇವೆ, ಕನಿಷ್ಟ 2 ವರ್ಷಗಳಿಂದ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ , ಇದು ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಉಪಾಧ್ಯಕ್ಷೆ ರೂತ್ ಕ್ರಿಚೇಲಿ ಹೇಳಿದ್ದಾರೆ.

ಈ ನಿಯಮದ ಪ್ರಕಾರ ವೈಯಕ್ತಿಕ ಗೂಗಲ್ ಖಾತೆಗಳು( ಜಿಮೇಲ್, ಡ್ರೈವ್, ಮೀಟ್ , ಕ್ಯಾಲೆಂಡರ್, ಗೂಗಲ್ ಫೋಟೋಸ್ ) ಮಾತ್ರ ರಿಲೀಡ್ ಆಗಲಿದೆ. ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್ ಖಾತೆ ಡಿಲೀಟ್ ಆಗಲ್ಲ ಎಂದು ಅವರು ಹೇಳಿದ್ದಾರೆ,

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read