ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಚಿನ್ನದ ಮೇಲಿನ ಹೂಡಿಕೆ ಪ್ರಚಲಿತದಲ್ಲಿದೆ. ಹೆಚ್ಚಿನ ಜನರು ಚಿನ್ನದ ಹೂಡಿಕೆಯನ್ನು ಸುರಕ್ಷಿತ ಆಯ್ಕೆ ಎಂದು ಪರಿಗಣಿಸುತ್ತಾರೆ. ಚಿನ್ನದ ಮೇಲಿನ ಹೂಡಿಕೆ ಎಂದಾಕ್ಷಣ ಕೇವಲ ಬಂಗಾರದ ಆಭರಣಗಳ ಖರೀದಿ ಎಂದರ್ಥವಲ್ಲ. ದೇಶದಲ್ಲಿ ಚಿನ್ನದ ಹೂಡಿಕೆಯ ವಿಧಾನಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ.
ಇತ್ತೀಚಿನ ದಿನಗಳಲ್ಲಿ ಜನರು ಭೌತಿಕ ಚಿನ್ನದಲ್ಲಿ ಅಂದರೆ ಆಭರಣಗಳಲ್ಲಿ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆಭರಣ ಖರೀದಿ ಮಾಡಿದ್ರೆ ಬಂಗಾರದ ಹೊರತಾಗಿ ಮೇಕಿಂಗ್ ಚಾರ್ಜ್ ಕೂಡ ತೆರಬೇಕಾಗುತ್ತದೆ. ಸಾಮಾನ್ಯ ಆಭರಣ ಮಾತ್ರವಲ್ಲದೆ ಭೌತಿಕ ಚಿನ್ನವನ್ನು ಚಿನ್ನದ ನಾಣ್ಯಗಳ ರೂಪದಲ್ಲಿ ಖರೀದಿಸಬಹುದು.
ಚಿನ್ನದ ಉಳಿತಾಯ ಯೋಜನೆಯು ಚಿನ್ನದ ಮೇಲೆ ಹೂಡಿಕೆ ಮಾಡಲು ಉತ್ತಮ ಆಯ್ಕೆ. ಇದರಲ್ಲಿ ಹೂಡಿಕೆದಾರರು ಪ್ರತಿ ತಿಂಗಳು ಒಂದು ಸಣ್ಣ ಮೊತ್ತವನ್ನು ನಿಗದಿತ ಅವಧಿಗೆ ಹೂಡಿಕೆ ಮಾಡುತ್ತಾರೆ. ಅವಧಿ ಮುಗಿದ ನಂತರ, ಸ್ವಲ್ಪ ಬೋನಸ್ ಜೊತೆಗೆ ಆ ಮೊತ್ತವನ್ನು ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಅನೇಕ ಆಭರಣ ವ್ಯಾಪಾರಿಗಳು ಗ್ರಾಹಕರ ಅನುಕೂಲಕ್ಕಾಗಿ ಈ ಯೋಜನೆಯನ್ನು ಪ್ರಾರಂಭಿಸುತ್ತಾರೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಗೋಲ್ಡ್ ಇಟಿಎಫ್ ಉತ್ತಮ ಮಾರ್ಗವಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಹಲವು ಮ್ಯೂಚುವಲ್ ಫಂಡ್‌ಗಳಿವೆ. ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಭೌತಿಕ ಚಿನ್ನಕ್ಕೆ ಸಮಾನವಾದ ಸ್ಥಿರ ಆದಾಯವನ್ನು ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡಲು ಟ್ರೇಡಿಂಗ್ ಖಾತೆಯನ್ನು ಹೊಂದಿರಬೇಕು.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಕೂಡ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಕಾಲಕಾಲಕ್ಕೆ SBG ಯೋಜನೆಯನ್ನು ಪ್ರಾರಂಭಿಸುವ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ರಿಸರ್ವ್ ಬ್ಯಾಂಕ್ ಹೂಡಿಕೆದಾರರಿಗೆ ಅತ್ಯುತ್ತಮ ಆಯ್ಕೆಯನ್ನು ಒದಗಿಸುತ್ತದೆ.
Paytm, Phone Pay, Google Pay ಮುಂತಾದ ಹಲವು ಆ್ಯಪ್‌ಗಳು ಕಾಲಕಾಲಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡುವ ಆಯ್ಕೆಯೊಂದಿಗೆ ಬರುತ್ತಲೇ ಇರುತ್ತವೆ. ಇಂತಹ ಆ್ಯಪ್‌ಗಳ ಮೂಲಕ ಚಿನ್ನದಲ್ಲಿ ಹೂಡಿಕೆ ಮಾಡುವುದನ್ನು ಡಿಜಿಟಲ್ ಚಿನ್ನ ಎಂದು ಹೆಸರಿಸಲಾಗಿದೆ. ಇದರಲ್ಲಿ, ನೀವು ಭೌತಿಕ ಚಿನ್ನದಂತೆ ಯಾವಾಗ ಬೇಕಾದರೂ ಚಿನ್ನವನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.